ಸೂಪ್ ಪ್ರಿಯರು ಮನೆಯಲ್ಲಿಯೇ ಬಾಳೆಹಣ್ಣಿನ ಸೂಪ್ ಮಾಡಿ ಟೇಸ್ಟ್ ಮಾಡಬಹುದು. ಈ ಸೂಪ್‌ನ್ನು ಮಕ್ಕಳು ಸಕತ್ ಇಷ್ಟಪಡ್ತಾರೆ. ಈ ಸೂಪ್‌ಗೆ ಏನೆಲ್ಲ ಬೇಕು? ಸೂಪ್ ಮಾಡೋದು ಹೇಗೆ ಎನ್ನುವ ವಿಧಾನ ಈ ಕೆಳಗಿದೆ.
ಬೇಕಾಗುವ ವಸ್ತುಗಳು
* ಬಾಳೆಹಣ್ಣು
* ತೆಂಗಿನ ಹಾಲು
* ಸಿಹಿ ಗೆಣಸು
ಮಾಡುವ ವಿಧಾನ
ಬಾಳೆಹಣ್ಣು ಮತ್ತು ಸಿಹಿ ಗೆಣಸನ್ನು ಸಿಪ್ಪೆ ಸುಲಿದು, ಸಣ್ಣ ತುಂಡುಗಳಾಗಿ ಕತ್ತರಿಸಬೇಕು ಅಥವಾ ಮ್ಯಾಶ್ ಮಾಡಬೇಕು. ಬಳಿಕ ಒಂದು ಪಾತ್ರೆಯಲ್ಲಿ, ಬಾಳೆಹಣ್ಣು ಮತ್ತು ಗೆಣಸನ್ನು ಸ್ವಲ್ಪ ನೀರಿನೊಂದಿಗೆ ಸೇರಿಸಿ ಕುದಿಸಬೇಕು. ಬಾಳೆಹಣ್ಣು ಮೆತ್ತಗಾದ ನಂತರ, ತೆಂಗಿನ ಹಾಲು ಸೇರಿಸಿ ಚೆನ್ನಾಗಿ ಬೆರೆಸಿ ಕುದಿಸಬೇಕು. ಬೇಕಾದರೆ ನಿಂಬೆ ರಸವನ್ನು ಸ್ವಲ್ಪ ಪ್ರಮಾಣದಲ್ಲಿ ಸೆರಿಸಿ, ಈಗ ನಿಮ್ಮ ಮುಂದೆ ಬಾಳೆಹಣ್ಣಿನ ಸೂಪ್ ಸವಿಯಲು ಸಿದ್ಧ.

