ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ 3 ತಿಂಗಳು ಕಳೆದ್ರೂ ಇಂದಿಗೂ ಕೋಟ್ಯಂತರ ಮನಗಳು ಪುನೀತ್‍ಗಾಗಿ ಮಿಡಿಯುತ್ತಿವೆ.
Advertisement
ಪುನೀತ್ ಅಗಲಿದ ಬಳಿಕ ಪ್ರತಿಮೆ ಸ್ಥಾಪನೆ ಮಾಡಿದ್ದು ಆಯ್ತು, ನೂರಾರು ಸಮಾಜ ಸೇವೆ ಮಾಡಿದ್ದೂ ಆಯ್ತು. ಇದೀಗ ಬೆಂಗಳೂರಿನ ಪುಲಕೇಶಿ ನಗರದ ಪಾಟರಿ ರಸ್ತೆಯಲ್ಲಿರೋ ಫೆದರ್ ಲೈಟ್ ಶಾಲೆ ಬಳಿ ಹೊಸ ಮೆಟ್ರೋ ನಿಲ್ದಾಣ ನಿರ್ಮಾಣವಾಗ್ತಿದ್ದು, ಇದಕ್ಕೆ ಅಪ್ಪು ಹೆಸರಿಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ. ಹೀಗಾಗಿ ಕರ್ನಾಟಕ ಬಹುಜನ ಫೆಡರೇಷನ್ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜೊತೆಗೆ ಬಿಎಂಆರ್ ಸಿಎಲ್ ಗೂ ಪತ್ರ ಬರೆದಿದೆ. ಇದನ್ನೂ ಓದಿ: ಇತಿಹಾಸದ ಪುಟಕ್ಕೆ ಮೊದಲ ಮಹಿಳಾ ಕನ್ನಡ ಶಾಲೆ – ವಿವೇಕನಾಂದರ ಸ್ಮಾರಕ ನಿರ್ಮಾಣಕ್ಕೆ ನೆಲಸಮ
Advertisement
Advertisement
ಮನವಿ ಪುರಸ್ಕರಿಸಿ ವಿಚಾರ ಮಾಡೋದಾಗಿ ಪ್ರಧಾನಿ ಕಚೇರಿ ಉತ್ತರ ಕೊಟ್ರೆ, ಇತ್ತ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಛೋಪ್ರಾ ಕೂಡ ಅಪ್ಪು ಹೆಸರಿಡೋದಾಗಿ ಭರವಸೆ ನೀಡಿದ್ದಾರೆ. ಆದರೆ ಬಿಬಿಎಂಪಿ, ಬಿಡಿಎಜೊತೆ ಚರ್ಚಿಸಿ ಬಿಎಂಆರ್ ಸಿಎಲ್ ಒಪ್ಪಿಗೆ ಪಡೆಯಬೇಕಿದೆ. ಇದಾದ ಬಳಿಕ ಕಮಿಟಿ ಓಕೆ ಅಂದ್ರೆ ಮೆಟ್ರೋ ನಿಲ್ದಾಣಕ್ಕೆ ಪುನೀತ್ ಹೆಸರು ನಾಮಕರಣ ಮಾಡಲಾಗುತ್ತೆ.