ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಿತಿಮೀರಿದ ಪುಂಡರ ಹಾವಳಿ ಮಿತಿ ಮೀರುತ್ತಿದ್ದು, ಇದೀಗ ಫೋನ್ ನಂಬರ್ ಕೊಟ್ಟಿಲ್ಲವೆಂದು ಮಹಿಳಾ ಟೆಕ್ಕಿ (Woman Techie) ಯನ್ನು ಮನೆಯವರೆಗೂ ಫಾಲೋ ಮಾಡಿ ಕಾರ್ ಗ್ಲಾಸ್ (Car Glass) ಒಡೆದ ಪ್ರಸಂಗವೊಂದು ನಡೆದಿದೆ.
Advertisement
ಬೆಂಗಳೂರು (Bengaluru) ಉತ್ತರ ತಾಲೂಕಿನ ಬೃಂದಾವನ ನಗರದಲ್ಲಿ ಈ ಘಟನೆ ನಡೆದಿದೆ. ಡ್ಯೂಟಿ ಮುಗಿಸಿ ಮನೆಗೆ ಬರುತ್ತಿದ್ದಾಗ ಅಡ್ಡಗಟ್ಟಿ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಟೆಕ್ಕಿ ಆರೋಪಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗೆ ಬೆಂಕಿ ಹಚ್ಚಿದ ಪ್ರಕರಣ- ಮನೆಗೆ ಬೀಗ ಜಡಿದು ಯುವತಿ ಮನೆಯವರು ಎಸ್ಕೇಪ್
Advertisement
Advertisement
ಆರೋಪವೇನು..?: ಎಂದಿನಂತೆ ಡ್ಯೂಟಿ ಮುಗಿಸಿ ಬರುತ್ತಿದ್ದ ವೇಳೆ ಏಕಾಏಕಿ ನುಗ್ಗಿ ಬಂದ ಇಬ್ಬರು, ಟೈಮ್ ಪಾಸ್ ಗಾಗಿ ನಿಮ್ಮ ಪೆÇೀನ್ ನಂಬರ್ ಕೊಡಿ ಮಾತನಾಡಬೇಕೆಂದು ಟಾರ್ಚರ್ ಕೊಟ್ಟಿದ್ದಾರೆ. ಈ ವೇಳೆ ಫೋನ್ ನಂಬರ್ (Phone Number) ಕೊಡಲು ನಿರಾಕರಿಸಿದ್ದೇನೆ. ಅಲ್ಲದೆ ನಿನಗೇಕೆ ನನ್ನ ನಂಬರ್ ಕೊಡಬೇಕು ಎಂದು ಬೈದು ಮನೆಗೆ ತೆರಳಿದ್ದೆ. ಆದರೆ ಕಿಡಿಗೇಡಿಗಳು ಮನೆವರೆಗೂ ಫಾಲೋ ಮಾಡಿಕೊಂಡು ಬಂದು ಕಾರ್ ಗ್ಲಾಸ್ ಒಡೆದು ಪರಾರಿಯಾಗಿದ್ದಾರೆ. ಮೊದಲು ಇಬ್ಬರೂ ತಮ್ಮ ಮುಖವನ್ನು ಮುಚ್ಚಿಕೊಂಡು ಬಂದು ಕಲ್ಲು ತೂರಿ ಪರಾರಿಯಾಗಿದ್ದಾರೆ. ಮತ್ತೆ ಕೆಲವೇ ನಿಮಿಷಗಳಲ್ಲಿ ಮತ್ತೊಮ್ಮೆ ಬೈಕ್ ನಲ್ಲಿ ಬಂದು ಬ್ರೀಜಾ ಕಾರಿನ ಮುಂಭಾಗದ ಗ್ಲಾಸ್ ಹೊಡೆದು ಎಸ್ಕೇಪ್ ಆಗಿದ್ದಾರೆ ಎಂದು ದೂರಿದ್ದಾರೆ.
Advertisement
ಓರ್ವನನ್ನು ಸ್ಥಳೀಯ ನಿವಾಸಿ ವೆಂಕಟೇಶ್ ಎಂದು ಗುರುತಿಸಲಾಗಿದೆ. ಸದ್ಯ ಮಹಿಳಾ ಟೆಕ್ಕಿ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ (Peenya Police Station) ಪ್ರಕರಣ ದಾಖಲಾಗಿದೆ.
Web Stories