ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ದಸರಾ (Dasara) ಆಚರಣೆ ಮತ್ತಷ್ಟು ಮೆರುಗು ಪಡೆದುಕೊಳ್ಳುತ್ತಿದ್ದು, ದಿನಕ್ಕೊಂದು ಕಾರ್ಯಕ್ರಮಗಳು ಆಕರ್ಷಕವಾಗಿದೆ. ಮಡಿಕೇರಿ ಜನತೆಗೆ ಮನೋರಂಜನೆಯ ರಸದೌತಣವನ್ನು ಉಣಿಸುತ್ತಿದೆ. ಇಂದು ಮಾತ್ರ ವೇದಿಕೆ ಸಂಪೂರ್ಣ ಹಳ್ಳಿಯ ವಾತಾವರಣದಿಂದ ಕೂಡಿದ್ದು, ಗ್ರಾಮೀಣ ಪ್ರದೇಶದ ಭಾವನೆಯನ್ನೇ ನೀಡುತ್ತದೆ.
Advertisement
ವಿವಿಧ ಸಂಸ್ಕೃತಿಗಳ ಆಗರವಾಗಿರುವ ಮಡಿಕೇರಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕೊಡಗು ಜಿಲ್ಲಾ ಘಟಕದಿಂದ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಮಡಿಕೇರಿಯ ಗಾಂಧಿ ಮೈದಾನದಲ್ಲಿ ಹಳ್ಳಿ ಸೊಗಡಿನ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮೀಣ ಸೊಗಡನ್ನು ಮೆರೆಯುತ್ತಿರುವ ನಗರದ ಜನತೆಗೆ ಗ್ರಾಮೀಣ ಜನ-ಜೀವನ, ಆಚಾರ-ವಿಚಾರ, ಹಳ್ಳಿಯ ವಾತಾವರಣದ ಅನುಭವ ನೀಡುವ ಉದ್ದೇಶವನ್ನು ಹೊಂದಿತ್ತು.ಇದನ್ನೂ ಓದಿ: ಕಲಬುರಗಿ| ಕರದಳ್ಳಿ ರಸ್ತೆ ಮಧ್ಯದಲ್ಲಿರುವ ಸೈಯದ್ ಪೀರ್ ದರ್ಗಾ ಧ್ವಂಸ
Advertisement
Advertisement
Advertisement
ಕಲಾ ವೇದಿಯಲ್ಲಿ ಗ್ರಾಮಿಣ ಸೊಗಡಿನ ಜಾನಪದ ಉತ್ಸವ ಅನಾವರಣಗೊಂಡಿದೆ. ಮಹಿಳೆಯರು ತಮ್ಮ ಹಳ್ಳಿ ಸೊಗಡಿನ ನೃತ್ಯ ಹಾಗೂ ಹಾಡುಗಳನ್ನು ಹಾಡುವ ಮೂಲಕ ಜಾನಪದ ಕಲೆಯನ್ನು ಅನಾವರಣಗೊಳಿಸಿದರು. ಐತಿಹಾಸಿಕ ದಸರಾ ಜನೋತ್ಸವ ಪ್ರಯುಕ್ತ ಬೃಹತ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮಗಳು ನೆರೆದವರನ್ನು ಜಾನಪದ ಲೋಕಕ್ಕೆ ಕರೆದೊಯ್ದಿತ್ತು. ಜನಪದೀಯ ಮಾದರಿಯಲ್ಲೇ ವೇದಿಕೆಯನ್ನು ಸಿದ್ಧಪಡಿಸಿದ್ದು ವಿಶೇಷವಾಗಿತ್ತು. ಇನ್ನೂ ಜಾನಪದ ದಸರಾದಲ್ಲಿ ಕನ್ನಡ, ಕೊಡವ, ಅರೆಭಾಷೆ, ತುಳು ಹಾಗೂ ಬ್ಯಾರಿ ಭಾಷೆಯ ಜನಪದೀಯ ಕಾರ್ಯಕ್ರಮಗಳು ನೆರವೇರಿದವು. ಇನ್ನೂ ಇದೇ ಸಂದರ್ಭದಲ್ಲಿ ಹಳೆಯ ವಸ್ತುಗಳ ಪ್ರದರ್ಶನ ಹಾಗೂ ಬಳೆ ತೊಡಿಸುವ ಕಾರ್ಯಕ್ರಮ ಕೂಡ ಎಲ್ಲರ ಗಮನ ಸೆಳೆಯಿತು.
ಒಟ್ಟಿನಲ್ಲಿ ಹಳ್ಳಿಯಿಂದಲೇ ದಿಲ್ಲಿ ಎಂಬ ಗಾದೆ ಮಾತಿನಂತೆ ದಿನ ಕಳೆದಂತೆ, ವರ್ಷಗಳು ಸರಿದಂತೆ ಗ್ರಾಮೀಣ ಭಾಗದ ಆಚರಣೆಗಳು ಉಳಿಸುವ ಉದ್ದೇಶವನ್ನು ಹೊಂದಿತ್ತು. ಈ ಮೂಲಕ ಗ್ರಾಮೀಣ ಭಾಗವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾನಪದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗ್ರಾಮೀಣ ಹಳ್ಳಿ ಸೊಗಡಿನ ವಾತಾವರಣ ನೀಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಲಾಗಿತ್ತು.ಇದನ್ನೂ ಓದಿ: Jammu Kashmir | ಕಾಂಗ್ರೆಸ್ ಬೆಂಬಲ ಇಲ್ಲದೇ ಬಹುಮತ ಸಾಧಿಸಿದ NC