ಕ್ಲಾಸ್‌ರೂಮ್‌ನಲ್ಲೇ ಅಪ್ರಾಪ್ತ ವಿದ್ಯಾರ್ಥಿ ಜೊತೆ ಸೆಕ್ಸ್‌ – ಶಿಕ್ಷಕಿ ಬಂಧನ

Public TV
1 Min Read
Florida Teacher

ನ್ಯೂಯಾರ್ಕ್‌: ಕ್ಲಾಸ್‌ರೂಮ್‌ನಲ್ಲೇ ವಿದ್ಯಾರ್ಥಿ ಜೊತೆ ಸೆಕ್ಸ್‌ ಮಾಡಿದ ಆರೋಪದಲ್ಲಿ ಫ್ಲೋರಿಡಾದ ರಿವರ್‌ವ್ಯೂ ಹೈಸ್ಕೂಲ್‌ನ ಶಿಕ್ಷಕಿಯನ್ನು ಬಂಧಿಸಲಾಗಿದೆ.

27 ವರ್ಷದ ಬ್ರೂಕ್ ಆಂಡರ್ಸನ್ ಬಂಧಿತ ಶಿಕ್ಷಕಿ. ಶಾಲಾ ದಿನ ಪ್ರಾರಂಭವಾಗುವ ಸ್ವಲ್ಪ ಮೊದಲು ವಿದ್ಯಾರ್ಥಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಹಿಲ್ಸ್‌ಬರೋ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.

ಆಂಡರ್ಸನ್ ಅಪ್ರಾಪ್ತ ವಯಸ್ಕನೊಂದಿಗೆ ತಿಂಗಳುಗಟ್ಟಲೆ ಲೈಂಗಿಕ ಸಂಬಂಧ ಹೊಂದಿದ್ದ ಆರೋಪ ಹೊತ್ತಿದ್ದಾರೆ. ಎರಡು ವಾರಗಳ ಹಿಂದೆ ಅಪ್ರಾಪ್ತನೊಂದಿಗೆ ಕಾನೂನುಬಾಹಿರ ಲೈಂಗಿಕ ಚಟುವಟಿಕೆಯ ಮೂರು ಆರೋಪಗಳನ್ನು ಎದುರಿಸಿದ್ದರು.

ಮೇ 16 ರ ಬೆಳಗ್ಗೆ ಆಂಡರ್ಸನ್ ಬಂಧನಕ್ಕೆ ಮುಂಚಿತವಾಗಿ ರಿವರ್‌ವ್ಯೂ ಪ್ರೌಢಶಾಲೆಯ ವಿದ್ಯಾರ್ಥಿಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದಳು ಎಂದು ಆರೋಪಿಸಲಾಗಿದೆ.

ಹಿಲ್ಸ್‌ಬರೋ ಕೌಂಟಿಯ ಸಾರ್ವಜನಿಕ ಶಾಲಾ ಶಿಕ್ಷಕರ ಡೈರೆಕ್ಟರಿಯ ಪ್ರಕಾರ, ಆಂಡರ್ಸನ್ ರಿವರ್‌ವ್ಯೂ ಹೈಸ್ಕೂಲ್‌ನಲ್ಲಿ ವಿಜ್ಞಾನ ಶಿಕ್ಷಕಿಯಾಗಿದ್ದಾರೆ. ಆದರೆ, ಬಂಧನದ ನಂತರ ಆ ಡೈರೆಕ್ಟರಿಯಿಂದ ಆಕೆಯ ಹೆಸರನ್ನು ತೆಗೆದುಹಾಕಲಾಯಿತು.

ಈ ಶಿಕ್ಷಕಿಯು ವಿದ್ಯಾರ್ಥಿ, ಶಾಲೆ ಮತ್ತು ಇಡೀ ಸಮುದಾಯದ ನಂಬಿಕೆಗೆ ದ್ರೋಹ ಬಗೆದಿದ್ದಾಳೆ. ಕಲಿಕೆಗೆ ಸುರಕ್ಷಿತ, ಬೆಂಬಲ ನೀಡುವ ವಾತಾವರಣವಿರಬೇಕಾದ ಸ್ಥಳವನ್ನು ದುರುಪಯೋಗಪಡಿಸಿಕೊಂಡಿದ್ದಾಳೆ. ಆಕೆಯ ನಡೆ ಅಪರಾಧದಿಂದ ಕೂಡಿದೆ ಎಂದು ಶೆರಿಫ್ ಚಾಡ್ ಕ್ರೋನಿಸ್ಟರ್ ತಿಳಿಸಿದೆ.

Share This Article