ಗುವಾಹಟಿ: ಭೀಕರ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಇದುವರೆಗೆ ಅಸ್ಸಾಂನಲ್ಲಿ 30 ಮಂದಿ ಪ್ರಾಣ ಕಳೆದುಕೊಂಡಿದ್ದು, 5.61 ಲಕ್ಷಕ್ಕೂ ಹೆಚ್ಚು ಜನರ ಬದುಕು ಅಸ್ತವ್ಯಸ್ತಗೊಂಡಿದೆ.
ಭಾರೀ ಮಳೆಯಿಂದಾಗಿ ಅಸ್ಸಾಂನಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ರಾಜ್ಯದ 29 ಜಿಲ್ಲೆಗಳು ಮಳೆಗಾಹುತಿಯಾಗಿವೆ. ಈ ಬಾರಿಯ ಪ್ರವಾಹ ಮತ್ತು ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಒಟ್ಟು ಸಂಖ್ಯೆ 30ಕ್ಕೆ ತಲುಪಿದೆ.
Advertisement
Advertisement
ಕ್ಯಾಚಾರ್, ದಿಮಾ ಹಸಾವೊ, ಹೈಲಕಂಡಿ, ಹೊಜೈ, ಕರ್ಬಿ ಆಂಗ್ಲಾಂಗ್ ವೆಸ್ಟ್, ಮೋರಿಗಾಂವ್ ಮತ್ತು ನಾಗಾವ್ ಜಿಲ್ಲೆಗಳಲ್ಲಿ 5,61,100ಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ ನಾಗಾವ್‍ನಲ್ಲಿ 3.68 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿದ್ದರೆ, ಕ್ಯಾಚಾರ್ ಸುಮಾರು 1.5 ಲಕ್ಷ ಜನರು ಮತ್ತು ಮೋರಿಗಾಂವ್‍ನಲ್ಲಿ 41,000 ಕ್ಕೂ ಹೆಚ್ಚು ಜನರ ಬದುಕು ಅಸ್ತವ್ಯಸ್ತಗೊಂಡಿದೆ. ಪ್ರಸ್ತುತ, 956 ಗ್ರಾಮಗಳು ಜಲಾವೃತವಾಗಿದ್ದು, ಅಸ್ಸಾಂನಾದ್ಯಂತ 47,139.12 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇದನ್ನೂ ಓದಿ: ಅಸ್ಸಾಂನಲ್ಲಿ ಭೀಕರ ಪ್ರವಾಹ – 14ಕ್ಕೇರಿದ ಸಾವಿನ ಸಂಖ್ಯೆ
Advertisement
Advertisement
ಅಂತರ ಸಚಿವಾಲಯದ ಕೇಂದ್ರ ತಂಡ ಗುರುವಾರ ಗುವಾಹಟಿ ತಲುಪಿದ್ದು, ರಾಜ್ಯದಲ್ಲಿನ ಪ್ರವಾಹ ಮತ್ತು ಭೂಕುಸಿತದ ಹಾನಿ ಮೌಲ್ಯಮಾಪನಕ್ಕಾಗಿ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಮತ್ತು ಅಧಿಕಾರಿಗಳೊಂದಿಗೆ ಸಂವಾದ ನಡೆಸಿತು. ಇದನ್ನೂ ಓದಿ: ದಾರಿಯಲ್ಲಿ ಸಿಕ್ಕ ಚಿನ್ನದ ಸರವನ್ನು ಪೊಲೀಸರಿಗೆ ನೀಡಿದ ಮಂಡ್ಯದ ಯುವಕ