ಗದಗ: ಮಲಪ್ರಭಾ ನದಿಯ ಪ್ರವಾಹದಿಂದ ಗದಗ ಜಿಲ್ಲೆಯಲ್ಲಿ ದಿನನಿತ್ಯ ಅನೇಕ ಮನೆಗಳು ಕುಸಿಯುತ್ತಿವೆ. ಮನೆಯಲ್ಲಿ ಸಂಗ್ರಹಿಸಿದ್ದ ಅಪಾರ ಪ್ರಮಾಣದ ಧವಸ ಧಾನ್ಯಗಳು ಮೊಳಕೆ ಒಡೆಯುತ್ತಿದ್ದು ತಿನ್ನುವ ಆಹಾರ ವಿಷವಾಗುತ್ತಿದೆ. ಪ್ರವಾಹ ತಗ್ಗಿದ್ದರು ಸಂತ್ರಸ್ತರ ಸಂಕಷ್ಟ ಮಾತ್ರ ಕಡಿಮೆಯಾಗಿಲ್ಲ.
ಗದಗ ಜಿಲ್ಲೆಯ ಹೊಳೆ ಆಲೂರ ಗ್ರಾಮದಲ್ಲಿ ಪ್ರವಾಹ ನಿಂತ ಮೇಲೆ ಸಂತ್ರಸ್ತರ ಸ್ಥಿತಿ ಕರುಣಾಜಕಕವಾಗಿದೆ. ಸಂತ್ರಸ್ತ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ. ಒಂದೆಡೆ ಮನೆ ಕುಸಿದು ಬೀಳುತ್ತಿದೆ, ಇನ್ನೊಂದೆಡೆ ಧವಸ ಧಾನ್ಯಗಳು ಮೊಳಕೆ ಒಡೆದು, ಒಣಗಿ ವಿಷವಾಗುತ್ತಿದೆ. ಜೊತೆಗೆ ಕುಡಿಯಲು ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ.
Advertisement
Advertisement
ಸಂತ್ರಸ್ತರು ಮನೆಗಳನ್ನು ಕಳೆದುಕೊಂಡು, ಇರೋಕೆ ಸೂರು ಇಲ್ಲದೆ ಕಣ್ಣೀರಿಡುತ್ತಿರುವ ದೃಶ್ಯಗಳನ್ನ ನೋಡಿದರೆ ಮನಕಲುಕುವಂತಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಜನರ ಬದುಕು ಬರಡಾಗಿದೆ. ಸಂತ್ರಸ್ತ ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ.