ಬಳ್ಳಾರಿ: ಮಾಜಿ ಸಚಿವ, ಹಾಲಿ ಹೊಸಪೇಟೆ ಕ್ಷೇತ್ರದ ಶಾಸಕ ಆನಂದ್‍ಸಿಂಗ್ ಅವರ ವಿರುದ್ಧ ಅಧಿಕಾರ ದುರುಪಯೋಗದ ಆರೋಪ ಕೇಳಿ ಬಂದಿದೆ.
ಶಾಸಕ ಆನಂದ್‍ಸಿಂಗ್ ಟೆಂಡರ್ ಕರೆಯದೇ ನಗರಸಭೆಗೆ ನಷ್ಟವುಂಟು ಮಾಡಿ ಪರಮಾಪ್ತರಿಗೆ ಜಾಹೀರಾತು ಎಜೆನ್ಸಿ ಕೊಡಿಸಿದ್ದು, ಶಾಸಕರು ತಮ್ಮ ಜಾಹಿರಾತುಗಳನ್ನು ಮಾತ್ರ ಪ್ರಸಾರ ಮಾಡುತ್ತಿದ್ದಾರೆ ಎಂದು ಸ್ವಂತ ಶಾಸಕರ ಸಹೋದರ ಹಾಗು ಜಿಲ್ಲಾ ಪಂಚಾಯತ್ ಸದಸ್ಯ ಪ್ರವೀಣ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.
ವಾಸ್ತವವಾಗಿ ಜಾಹೀರಾತು ಟೆಂಡರ್ ನಿಂದ ನಗರಸಭೆಗೆ ಲಕ್ಷಾಂತರ ಆದಾಯ ಬರಬೇಕು. ಆದರೆ ಐದು ವರ್ಷದ ಅವಧಿಗೆ ಕೇವಲ 50 ಸಾವಿರ ರೂಪಾಯಿಗೆ ಗುತ್ತಿಗೆ ನೀಡಲಾಗಿದೆ. ಶಾಸಕ ಆನಂದ್ ಸಿಂಗ್ ಅವರು ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್-ಬಿಜೆಪಿಯಲ್ಲಿರುವ ಅಣ್ಣ ತಮ್ಮಂದಿರ ಈ ದಾಯಾದಿ ಕಲಹದಿಂದಾಗಿ ಹಗರಣಗಳು ಬೆಳಕಿಗೆ ಬರುತ್ತಿದ್ದು, ಈ ಬಗ್ಗೆ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ.