ಬೆಂಗಳೂರು: ನಗರದ ನಾನಾ ಕಡೆ ‘ಮೂರು ಬಿಟ್ಟವರು ಊರಿಗೆ ದೊಡ್ಡವರು’ ಚಿತ್ರದ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ.
ಬಳ್ಳಾರಿ ರಸ್ತೆ, ರಾಜಾಜಿನಗರ, ನೆಲಮಂಗಲ ಸೇರಿದಂತೆ ಹಲವು ಕಡೆ ಚಿತ್ರದ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದ್ದು, ಕಿಡಿಗೇಡಿಗಳಿಗೆ ಎಚ್ಚರಿಕೆ, ಈ ಪೋಸ್ಟರ್ ಸಿಸಿಟಿವಿ ಕಣ್ಗಾವಲಿನಲ್ಲಿದೆ ಅಂತಾ ಅಡಿಬರಹ ಬರೆಯಲಾಗಿದೆ.
Advertisement
Advertisement
ಮಾಜಿ ಡಿಸಿಎಂ ಈಶ್ವರಪ್ಪ ಆಪ್ತ ವಿನಯ್, ಬಿಎಸ್‍ವೈ ವಿರುದ್ಧ ಈ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿನಿಮಾಗೆ `ಮೂರು ಬಿಟ್ಟುವರು ದೇವರಿಗೆ ದೊಡ್ಡವರು’ ಎಂಬ ಟೈಟಲ್ ಇರಿಸಲಾಗಿದ್ದು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರದ ಟೈಟಲ್ ರಿಜಿಸ್ಟರ್ ಆಗಿದೆ. ಶೋಭಾ ಪಾಲಿಟಿಕ್ಸ್ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.
Advertisement
Advertisement
ಕಥಾ ನಾಯಕ ವಿನಯ್ ರಾಜಕೀಯ ನಾಯಕನ ಜೊತೆ ಕೆಲ್ಸ ಮಾಡ್ಕೊಂಡಿರುತ್ತಾನೆ. ಆದ್ರೆ ಆ ವ್ಯಕ್ತಿ ದೊಡ್ಡ ನಾಯಕನಾಗಿ ಬೆಳೀತಾನೆ ಅಂತಾ ಕೊಲೆಗೆ ಸಂಚು ರೂಪಿಸ್ತಾರೆ. ಅಪಾಯದಿಂದ ಪಾರಾದ ಹೀರೋ ತನ್ನ ಎದುರಾಳಿ ರಾಜಕಾರಣಿಗಳನ್ನು ರಾಜಕೀಯದಿಂದಲೇ ನಿವೃತ್ತಿಯಾಗುವಂತೆ ಮಾಡ್ತಾನೆ ಅನ್ನೋದು ಕಥೆ.
ತೆರೆ ಮೇಲೆ ವಿನಯ್ ಹೀರೋ ಆಗಿ ಮಿಂಚಲಿದ್ದರೆ, ರಾಯಚೂರಪ್ಪ ಪಾತ್ರಕ್ಕೆ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಬಣ್ಣ ಹಚ್ಚೋ ಸಾಧ್ಯತೆಯಿದೆ ಎನ್ನಲಾಗಿದೆ. ಕವಿ ರಾಜೇಶ್, ಮಾರುತಿ ಜಡೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.