ಮೈಸೂರು: ನಗರದ ಬ್ಯೂಟಿ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ದಂಧೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ವಿಚಾರಣೆ ವೇಳೆ ಬ್ಲೂ ಫಿಲಂ ತೆಗೆಯುತ್ತಿದ್ದ ವಿಚಾರ ಬಹಿರಂಗವಾಗಿದೆ.
ವಿಜಯನಗರ ವಾಟರ್ ಟ್ಯಾಂಕ್ ಬಳಿ ಇರುವ ಚಂದನ್ ಬ್ಯೂಟಿ ಪಾರ್ಲರ್ ಹಾಗೂ ಹೂಟಗಳ್ಳಿಯಲ್ಲಿರುವ ಐಶ್ವರ್ಯ ಬ್ಯೂಟಿ ಪಾರ್ಲರ್ ಮೇಲೆ ದಾಳಿ ನಡೆದಿತ್ತು. ಈ ವೇಳೆ ಪೊಲೀಸರಿಗೆ ಒಂದು ಡೈರಿ ಸಿಕ್ಕಿತ್ತು. ಈಗ ಆ ಡೈರಿಯಿಂದ ಹೈಟೆಕ್ ವೇಶ್ಯಾವಟಿಕೆ ದಂಧೆಗೆ ಪೊಲೀಸರ ಕುಮ್ಮಕ್ಕು ನೀಡಿರುವ ಶಂಕೆ ವ್ಯಕ್ತವಾಗಿದೆ. ಡೈರಿಯಲ್ಲಿ ಸಿಸಿಬಿಗೆ 7 ಸಾವಿರ, ಪೇದೆಯೊಬ್ಬರಿಗೆ 10 ಸಾವಿರ ಹಣ ಕೊಟ್ಟಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದರಿಂದ ಈ ದಂಧೆಯಲ್ಲಿ ಪೊಲೀಸರು ಇದ್ದಾರೆ ಎಂದು ದಾಳಿ ನಡೆಸಿದ್ದ ಪೊಲೀಸರು ಶಂಕಿಸಿದ್ದಾರೆ.
Advertisement
Advertisement
ಖಚಿತ ಮಾಹಿತಿ ಮೇರೆಗೆ ಮೈಸೂರಿನ ವಿಜಯನಗರ ಪೊಲೀಸರು ಹಾಗೂ ಒಡನಾಡಿ ಸಂಸ್ಥೆಯವರು ಜಂಟಿಯಾಗಿ ಶನಿವಾರ ಸಂಜೆ 7 ಗಂಟೆಗೆ ಎರಡು ಬ್ಯೂಟಿ ಪಾರ್ಲರ್ ಗಳ ಮೇಲೆ ದಾಳಿ ನಡೆಸಿದ್ದರು. ಇದೇ ವೇಳೆ ಬ್ಯೂಟಿ ಪಾರ್ಲರ್ ಗಳಲ್ಲಿ ಬ್ಲೂಫಿಲ್ಮ್ ಚಿತ್ರೀಕರಿಸುತ್ತಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿತ್ತು.
Advertisement
ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಪಾರ್ಲರ್ ಗಳಿಗೆ ಬರುತ್ತಿದ್ದ ಕೆಲವು ಯುವತಿರ ನಗ್ನ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ವಿಚಾರವನ್ನು ಬಾಯಿ ಬಿಟ್ಟಿದ್ದಾರೆ. ಬಳಿಕ ಇದೇ ವೀಡಿಯೋ ಮುಂದಿಟ್ಟುಕೊಂಡು ಪಾರ್ಲರ್ ಗೆ ಬರುತ್ತಿದ್ದ ಗ್ರಾಹಕರಿಗೆ ಬ್ಲ್ಯಾಕ್ ಮೇಲೆ ಮಾಡಿ ಅವರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದರು. ಇದರ ಚಿತ್ರೀಕರಣವನ್ನೂ ಆರೋಪಿಗಳು ಮಾಡುತ್ತಿದ್ದರು ಎಂಬ ಅಂಶ ಬಯಲಾಗಿದೆ.
Advertisement
ವಿಜಯನಗರ ಪೊಲೀಸರು ಹಾಗೂ ಒಡನಾಡಿ ಸಂಸ್ಥೆ ಜಂಟಿ ಕಾರ್ಯಾಚರಣೆ ನಡೆಸಿದ್ದು, 7 ಯುವತಿಯ ರಕ್ಷಣೆ ಮಾಡಿ, 5 ಮಂದಿ ಪುರುಷರನ್ನು ಬಂಧಿಸಲಾಗಿದ್ದು, ಒಂದು ಕಾರು, ಮೊಬೈಲ್ ಹಾಗೂ ಮೂರು ಬೈಕ್ ವಶಪಡಿಸಿಕೊಳ್ಳಲಾಗಿದೆ.