ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ ಡ್ರೀಮ್‌ಲೈನರ್‌ನಲ್ಲಿ ತಾಂತ್ರಿಕ ದೋಷ – ಮರಳಿ ಲಂಡನ್‌ನಲ್ಲಿ ಲ್ಯಾಂಡಿಂಗ್‌!

Public TV
1 Min Read
flap adjustment failure British Airways flight from London to Chennai returns to Heathrow Airport

ಲಂಡನ್‌: ತಾಂತ್ರಿಕ ಸಮಸ್ಯೆಯಿಂದ ಚೆನ್ನೈಗೆ (Chennai) ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ (British Airways) ವಿಮಾನ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ (London Heathrow Airport) ಮರಳಿದ ಘಟನೆ ಭಾನುವಾರ ನಡೆದಿದೆ.

ಫ್ಲೈಟ್‌ರಾಡಾರ್ 24 ನೊಂದಿಗೆ ಲಭ್ಯವಿರುವ ಮಾಹಿತಿಯ ಪ್ರಕಾರ, BA35 ವಿಮಾನವು 36 ನಿಮಿಷಗಳ ವಿಳಂಬದ ಬಳಿಕ ಮಧ್ಯಾಹ್ನ 1:16 ಕ್ಕೆ ಹೀಥ್ರೂ ವಿಮಾನ ನಿಲ್ದಾಣದಿಂದ ಟೇಕಾಫ್‌ ಆಗಿದೆ.


ಬೋಯಿಂಗ್ 787-8 ಡ್ರೀಮ್‌ಲೈನರ್ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಹಿಂತಿರುಗುವ ಮೊದಲು ಡೋವರ್ ಜಲಸಂಧಿಯ ಮೇಲೆ ಹಲವು ಬಾರಿ ಸುತ್ತು ಹಾಕಿತ್ತು. ವಿಮಾನವು ಹಿಂತಿರುಗುವ ಮೊದಲು ಸುಮಾರು 9,000 ಅಡಿಗಳಷ್ಟು ಎತ್ತರಕ್ಕೆ ಕುಸಿದಿತ್ತು.

ಟೇಕಾಫ್‌ ಆದ ನಂತರ ರೆಕ್ಕೆಗಳಲ್ಲಿರುವ ಫ್ಲಾಪ್‌ನಲ್ಲಿ (Flap Adjustment) ಸಮಸ್ಯೆ ಇರುವುದು ಕ್ಯಾಪ್ಟನ್‌ಗೆ ಗೊತ್ತಾಗಿದೆ. ನಂತರ ಮರಳಿ ಲಂಡನ್‌ಗೆ ಮರಳಲು ನಿರ್ಧರಿಸಿದ ಕ್ಯಾಪ್ಟನ್‌ ಮಧ್ಯಾಹ್ನ 1:52ಕ್ಕೆ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಲ್ಯಾಂಡ್‌ ಮಾಡಿಸಿದ್ದಾರೆ.

flap adjustment failure British Airways flight from London to Chennai returns to Heathrow Airport22

Share This Article