– ಜುಲೈನಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ
ಹುಬ್ಬಳ್ಳಿ: ವಂದೇ ಭಾರತ್ ಸೆಮಿಸ್ಪೀಡ್ ರೈಲಿನಲ್ಲಿ (Vande Bharat Express) ಓಡಾಡಬೇಕು ಎಂಬ ಉತ್ತರ ಕರ್ನಾಟಕ ಜನರ ಕನಸು ಶೀಘ್ರದಲ್ಲಿಯೇ ನನಸಾಗಲಿದ್ದು, ಜುಲೈನಲ್ಲಿ ಧಾರವಾಡ-ಬೆಂಗಳೂರು (Bengaluru-Dharawada) ವಂದೇ ಭಾರತ್ ರೈಲಿಗೆ ಚಾಲನೆ ದೊರೆಯಲಿದೆ.
Advertisement
Advertisement
ಬಹುನಿರೀಕ್ಷಿತ ಧಾರವಾಡ-ಬೆಂಗಳೂರು ಮಧ್ಯೆ ವಂದೇ ಭಾರತ ರೈಲು ಸಂಚಾರಕ್ಕೆ ಕೊನೆಯ ಹಂತದ ಸಿದ್ಧತೆ ನಡೆಯುತ್ತಿದ್ದು, ರಾಜ್ಯದಲ್ಲಿ ಓಡಾಟ ನಡೆಸುವ ಎರಡನೇ ವಂದೇ ಭಾರತ್ ರೈಲು ಇದಾಗಿದೆ. ರೈಲು ಸೇವೆಯ ಆರಂಭಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಪೂರ್ಣವಾದ ಹಿನ್ನಲೆ, ಕೇಂದ್ರ ರೈಲ್ವೇ ಮಂತ್ರಿ ಅಶ್ವಿನಿ ವೈಷ್ಣವ (Ahswini Vaishnaw) ಅವರನ್ನು ಭೇಟಿ ಮಾಡಿರುವ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ. ಜುಲೈ ವೇಳೆಗೆ ರಾಜ್ಯದ ಎರಡನೇ ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ಭರವಸೆಯನ್ನು ರೈಲ್ವೆ ಸಚಿವರು ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪೊಲೀಸ್ ಇಲಾಖೆಯಲ್ಲಿ ಸಲ್ಯೂಟ್, ಒದೆನೂ ಸಿಗುತ್ತೆ, ಗುಂಡು ಹಾರಿಸೋದು ಇರುತ್ತೆ: ಜಿ ಪರಮೇಶ್ವರ್
Advertisement
ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಸ್ಪಷ್ಟಪಡಿಸಿದ್ದಾರೆ. ದೇಶದ ಅತಿ ವೇಗದ ರೈಲು ಇದಾಗಿದ್ದು, ಗಂಟೆಗೆ ಗರಿಷ್ಠ 160 ಕಿ.ಮೀ ವೇಗದದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಐಷರಾಮಿ ವ್ಯವಸ್ಥೆ ಸೀಟುಗಳನ್ನು ವಿಮಾನದ ರೀತಿ ನಿರ್ಮಿಸಲಾಗಿದ್ದು, ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯ ಹೊಂದಿದೆ.
Advertisement
ಹವಾನಿಯಂತ್ರಿತ ಎಕಾನಮಿ ಮತ್ತು ಪ್ರೀಮಿಯಂ ಕ್ಲಾಸ್‌ಗಳು, ಆನ್‌ಬೋರ್ಡ್ ಉಪಾಹಾರದ ವ್ಯವಸ್ಥೆ, ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲು, ವೈಫೈ, ಮಾಹಿತಿ ಪಡೆಯಬಹುದಾಗಿದೆ. ಚಾರ್ಜಿಂಗ್ ಪಾಯಿಂಟ್, ಸಿಸಿಟಿವಿ, ಬಯೋ ಶೌಚಾಲಯ ವ್ಯವಸ್ಥೆ ಒಳಗೊಂಡಿರುವ ರೈಲು ಇದಾಗಿದೆ. ಇದನ್ನೂ ಓದಿ: ಮಹಿಳೆಯರ ಉಚಿತ ಬಸ್ ಪ್ರಯಾಣ- ಪುರುಷರಿಗೆ ಟೆನ್ಶನ್ ಶುರು!