ಚಿಕ್ಕಬಳ್ಳಾಪುರ: ಹೆದ್ದಾರಿಯಲ್ಲಿ ಅಡ್ಡ ಬಂದ ಹಾವನ್ನು(Snake) ತಪ್ಪಿಸಲು ಹೋಗಿ ಟ್ರಕ್ ಚಾಲಕನೊರ್ವ ಸಡನ್ ಬ್ರೇಕ್ ಹಾಕಿದ ಪರಿಣಾಮ ಸರಣಿ ಅಪಘಾತ(Serial Accident) ಸಂಭವಿಸಿರುವ ಘಟನೆ ಬೆಂಗಳೂರು – ಹೈದರಾಬಾದ್(Bengaluru – Hyderabad) ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದ ಬಳಿ ನಡೆದಿದೆ.
ಹೈದರಾಬಾದ್ ಕಡೆಯಿಂದ ಬೆಂಗಳೂರು ಕಡೆಗೆ ಕಂಟೈನರ್(Continer) ಟ್ರಕ್ ಬರುತ್ತಿತ್ತು. ಅಗಲಗುರ್ಕಿ ಗ್ರಾಮದ ಬಳಿ ಹೆದ್ದಾರಿಯ ನಡುರಸ್ತೆಯಲ್ಲಿ ಹಾವೊಂದು ರಸ್ತೆ ದಾಟುತ್ತಿತ್ತು. ಇದನ್ನು ಗಮನಿಸಿದ ಚಾಲಕ ಸಡನ್ ಆಗಿ ಟ್ರಕ್ ಬ್ರೇಕ್ ಹಾಕಿದ್ದಾನೆ. ಇದನ್ನೂ ಓದಿ: ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ ಜೀವ ಉಳಿಸಿಕೊಂಡ ತಾಯಿ-ಮಗ!
Advertisement
Advertisement
ಪರಿಣಾಮ ಹಿಂದೆ ಇದ್ದ ಕಂಟೈನರ್ ಟ್ರಕ್, ಟಾಟಾ ಏಸ್, ಕಾರು, ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಸೇರಿದಂತೆ ಐದು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಟಾಟಾ ಏಸ್ ಚಾಲಕನ ಸ್ಥಿತಿ ಗಂಭೀರವಾಗಿದೆ.
Advertisement
ಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಮುಂದಿನ ಲಾರಿಗೆ ಡಿಕ್ಕಿ ಹೊಡೆದ ಕಾರಣ ಅದರಲ್ಲಿದ್ದ ಚಾಲಕನಿಗೆ ಸ್ಟೇರಿಂಗ್ ಹೊಟ್ಟೆ ತಗುಲಿ ರಕ್ಷಣೆಗೆ ಮೊರೆ ಇಟ್ಟಿದ್ದಾನೆ. ಪಕ್ಕದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು, ರಕ್ಷಣೆಗೆ ಧಾವಿಸಿದ್ದಾರೆ.
Advertisement
ಗ್ಯಾಸ್ ವೆಲ್ಡರ್‌ನನ್ನು ಸ್ಥಳಕ್ಕೆ ಕರೆಸಿ ಟಿಪ್ಪರ್ ಡೋರ್ ಹಾಗೂ ಮುಂಭಾಗವನ್ನು ಕತ್ತರಿಸಿ ಚಾಲಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮತ್ತೊಂದೆಡೆ ಪೊಲೀಸರು ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ಮಾಡ್ತಿರುವ ಕಾರಣ ಪದೇ ಪದೇ ಅಪಘಾತಗಳು ಆಗುತ್ತಿವೆ. ಘಟನೆಗೆ ಸಂಚಾರಿ ಠಾಣೆ ಪೊಲೀಸರೇ ಕಾರಣ ಎಂದು ಸ್ಥಳಿಯರು ಪೊಲೀಸರ ವಿರುದ್ದ ತಿರುಗಿ ಬಿದ್ದ ಘಟನೆ ನಡೆಯಿತು.