ಹುಬ್ಬಳ್ಳಿ: ಇಲ್ಲಿನ (Hubballi) ಕಿಮ್ಸ್ ಆಸ್ಪತ್ರೆಯಲ್ಲಿ (KIMS Hospital) ಶವ ಪ್ಯಾಕ್ ಮಾಡಿಕೊಡಲು ಲಂಚ (Bribe) ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಹೊರ ಗುತ್ತಿಗೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಮಹಿಳೆಯೊಬ್ಬಳ ಶವವನ್ನು ಪ್ಯಾಕ್ ಮಾಡಲು ಐವರು ಸಿಬ್ಬಂದಿ ಹಣ ವಸೂಲಿ ಮಾಡಿದ್ದರು. ಸಿಬ್ಬಂದಿಯ ಅಮಾನವೀಯ ಕೃತ್ಯಕ್ಕೆ ಮೃತಳ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದರು. ಲಂಚಾವತಾರ ಬಯಲಾದ ಬಳಿಕ ಹಣ ವಸೂಲಿ ಮಾಡಿದ ಐವರು ಡಿ ಗ್ರೂಪ್ ನೌಕರರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ವಾಯುಸೇನೆಗೆ 114 ರಫೇಲ್ ವಿಮಾನ – ಅತಿದೊಡ್ಡ ರಕ್ಷಣಾ ಖರೀದಿಗೆ ಅನುಮತಿ
ಏನಿದು ಘಟನೆ?
ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆಶಾಳ ಅಡವಿಬಾವಿ ನಿವಾಸಿಯಾಗಿರೋ ಗದ್ದೆಮ್ಮಾ (52) ಎನ್ನುವ ಮಹಿಳೆ ಪಿತ್ತಕೋಶದ ಕಲ್ಲುಗಳಿಂದ ಅಸ್ವಸ್ಥರಾಗಿದ್ದರು. ಹೀಗಾಗಿ ಅವರನ್ನು ಕಳೆದ ಜ.31ರಂದು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿತ್ತು. ಕಳೆದ ಶನಿವಾರ ಅವರಿಗೆ ಶಸ್ತ್ರಚಿಕಿತ್ಸೆ ಕೂಡ ನಡೆದಿತ್ತು. ಆದ್ರೆ ಗದ್ದೆಮ್ಮಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಅವರ ಶವವನ್ನು ಪ್ಯಾಕ್ ಮಾಡಿ ವಾಹನಕ್ಕೆ ಹಾಕಲು ಅಲ್ಲಿನ ಡ್ರಿ ಗ್ರೂಪ್ ಸಿಬ್ಬಂದಿ ಐನೂರು ರೂಪಾಯಿಗೆ ಬೇಡಿಕೆ ಇಟ್ಟಿದ್ದರು.
ಕೊನೆಗೂ ಬೆನ್ನು ಬಿದ್ದು 200 ರೂಪಾಯಿ ಪಡೆದಿದ್ದರು. ಶವವನ್ನು ವಾಹನಕ್ಕೆ ಹಾಕಿದ ಮೇಲೆ ಮತ್ತೆ 200 ರೂಪಾಯಿಗಾಗಿ ಪೀಡಿಸಿದ್ದರು. ಇದರಿಂದ ನೊಂದ ಗದ್ದೆಮ್ಮಾ ಸಂಬಂಧಿ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಇದನ್ನೂ ಓದಿ: ಫೆ.13 ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ – ಅದ್ಧೂರಿಯಾಗಿ ನೆರವೇರಿದ ತುಂಗಭದ್ರಾ ಆರತಿ

