ನವದೆಹಲಿ: ಐದು ನದಿಗಳ ಜೋಡಣೆಗೆ ಬಜೆಟ್ ಘೋಷಣೆಯಾದ ಬೆನ್ನಲ್ಲೇ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಕಾರ್ಯಪ್ರವೃತ್ತವಾಗಿದೆ. ನದಿ ಜೋಡಣೆ ಸಂಬಂಧ ಚರ್ಚಿಸಲು ದಕ್ಷಿಣ ರಾಜ್ಯಗಳ ಮೊದಲ ಸಭೆ ಕರೆದಿದೆ.
ನಾಳೆ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ನೇತೃತ್ವದಲ್ಲಿ ಮೊದಲ ಸಭೆ ನಡೆಯಲಿದ್ದು, ಸಭೆಯಲ್ಲಿ ಕಾವೇರಿ-ಗೋದಾವರಿ, ಕೃಷ್ಣಾ-ಪೆನ್ನಾರು ಸೇರಿದಂತೆ ನದಿ ಜೋಡಣೆ ಯೋಜನೆಗಳ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕಸ ಹಾಕೋ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ – ವೀಡಿಯೋ ವೈರಲ್
Advertisement
Advertisement
ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಲಿದ್ದು, ಸಭೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ ಮಾಡಲಿದ್ದಾರೆ. ಅಲ್ಲದೇ ನದಿ ಜೋಡಣೆ ಬಗ್ಗೆ ರಾಜ್ಯಗಳ ಅಭಿಪ್ರಾಯವನ್ನು ಜಲ ಸಂಪನ್ಮೂಲ ಇಲಾಖೆ ಪಡೆಯಲಿದೆ. ಇದನ್ನೂ ಓದಿ: ಆಮ್ ಆದ್ಮಿ, ಕಾಂಗ್ರೆಸ್ ಪಕ್ಷದ Xerox Copy: ಮೋದಿ ವ್ಯಂಗ್ಯ
Advertisement
Advertisement
ಬಜೆಟ್‍ನಲ್ಲಿ ಐದು ನದಿಗಳ ಜೋಡಣೆಗೆ ಘೋಷಣೆ ಮಾಡಲಾಗಿದ್ದು, ರಾಜ್ಯಗಳ ಒಪ್ಪಿಗೆ ಮೇರೆಗೆ ಕೇಂದ್ರ ಸರ್ಕಾರ ನದಿಗಳನ್ನು ಜೋಡಿಸಲಿದ್ದು, ನೀರು ಹರಿವು ಹೆಚ್ಚು ಮಾಡಲಿದೆ ಎಂದು ಹೇಳಲಾಗಿತ್ತು. ಇದಕ್ಕೆ ಆರಂಭಿಕವಾಗಿ ಪ್ರತಿಕ್ರಿಯಿಸಿದ ಕರ್ನಾಟಕ ಕಾವೇರಿ ಪೆನ್ನಾರ್ ನದಿ ಜೋಡಣೆ ವಿಚಾರದಲ್ಲಿ ಮೊದಲು ನೀರಿನ ಹಂಚಿಕೆ ನಿರ್ಧಾರವಾಗಬೇಕು ಎಂದು ಹೇಳಿತ್ತು.