ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣ ಬಂಧನದ ಹಿಂದೆ ರಾಜಕೀಯ ಹಾಗೂ ಪೆನ್‍ಡ್ರೈವ್ ಪ್ರಕರಣ ಹಿಂದೆ ಪ್ರಭಾವಿಗಳ ಕೈವಾಡ ಇದೆ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ (HP Swaroop Prakash) ಆರೋಪಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪೆನ್‍ಡ್ರೈವ್ ಹಂಚಿಕೆ ಹಿಂದೆ ಪ್ರಭಾವಿಗಳ ಕೈವಾಡವಿದೆ. ಇದರ ಬಗ್ಗೆ ಎಸ್‍ಐಟಿ (SIT) ಸಮಗ್ರ ತನಿಖೆ ಮಾಡಬೇಕು. ಈಗ ಬಂಧಿತವಾಗಿರುವ ಯಾರೆಂದು ನನಗೂ ಗೊತ್ತಿಲ್ಲ. ಆದರೆ ಮಹಿಳೆಯರ ಮುಖವನ್ನು ಬ್ಲರ್ ಮಾಡದೆ ವೀಡಿಯೋ ವೈರಲ್ ಮಾಡಿದ್ದಾರೆ ಎಂದರು.
ಪೆನ್‍ಡ್ರೈವ್ ಹಂಚಿಕೆ ಹಿಂದೆ ಯಾರೇ ಇದ್ದರೂ ತನಿಖೆ ನಡೆಸಿ ಬಂಧನ ಮಾಡಬೇಕು. ಎಫ್‍ಐಆರ್ ದಾಖಲಾಗಿರುವ ಐದು ಜನರನ್ನು ಇದುವರೆಗೂ ಬಂಧನ ಮಾಡಿಲ್ಲ. ಅಷ್ಟೊಂದು ಪೆನ್‍ಡ್ರೈವ್ ಹಂಚಿಕೆ ಮಾಡಿದವರು ಎಂದು ಸತ್ಯಾಂಶ ಹೊರಬರಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ವೀಡಿಯೋ ನೋಡಿದವರೆಲ್ಲ ತಪ್ಪಿತಸ್ಥರು ಅಂದ್ರೆ ಹಾಸನದ 15 ಲಕ್ಷ ಜನ ತಪ್ಪಿತಸ್ಥರಾಗ್ತಾರೆ: ಪ್ರೀತಂಗೌಡ
ಎಚ್.ಡಿ.ರೇವಣ್ಣ ಬಂಧನ ಇದೆ ರಾಜಕೀಯ ಷಡ್ಯಂತ್ರವಿದೆ. ದೇವೇಗೌಡರ (HD Devegowda) ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ರೇವಣ್ಣ ಬಂಧನ ಮಾಡಿರುವುದರ ಹಿಂದೆ ರಾಜಕೀಯವಿದೆ. ಎಸ್‍ಐಟಿ ಸರ್ಕಾರದ ಅಣತಿಯಂತೆ ನಡೆಯುತ್ತಿದೆ. ಎಸ್‍ಐಟಿಯಿಂದ ಸರಿಯಾದ ತನಿಖೆ ಆಗಲ್ಲ. ಇಂತಹ ದೊಡ್ಡ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಯಾರೇ ತಪ್ಪು ಮಾಡಿದ್ದರು ಶಿಕ್ಷೆಯಾಗಲಿ. ಎ.ಮಂಜು ಶಾಸಕರು, ಶಾಸಕರ ಮೇಲೆ ಆರೋಪಗಳು ಸಹಜ. ಮೊದಲು ನವೀನ್ ಗೌಡ ಬಂಧಿಸುವಂತೆ ಸ್ವರೂಪ ಒತ್ತಾಯ ಮಾಡಿದರು.