ರಾಯಪುರ್: ಓರ್ವ ಯೋಧ ಸೇರಿ ಐವರನ್ನು ಮಾವೋವಾದಿಗಳು ಹತ್ಯೆ ಮಾಡಿರುವ ಘಟನೆ ಛತ್ತೀಸಗಢ ರಾಜ್ಯದ ದಾಂತೇವಾಡ ಜಿಲ್ಲೆಯಲ್ಲಿ ನಡೆದಿದೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಸಿಎಫ್) ಸಿಬ್ಬಂದಿ ಅಡುಗೆ ಸಾಮಾಗ್ರಿಗಳನ್ನು ಖರೀದಿಸಿಕೊಂಡು ಕ್ಯಾಂಪ್‍ಗೆ ಮರಳುತ್ತಿದ್ದರು. ಈ ವೇಳೆ ಬಚೇಲಿ ಗುಡ್ಡಗಾಡು ಪ್ರದೇಶದಲ್ಲಿ ಬಸ್‍ನಲ್ಲಿದ್ದ ಬಾಂಬ್ ಸ್ಫೋಟಗೊಂಡು ಓರ್ವ ಸಿಐಸಿಎಫ್ ಯೋಧ ಹಾಗೂ ಚಾಲಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
Advertisement
ಛತ್ತೀಸಗಢ್ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಜಗ್ದಾಲ್‍ಪುರ್ ಗೆ ಭೇಟಿ ನೀಡುತ್ತಿದ್ದರು. ಮಾವೋವಾದಿಗಳು ಇಂದು ದಾಳಿ ಮಾಡಿದ ಪ್ರದೇಶದಿಂದ ಜಗ್ದಾಲ್‍ಪುರ್ 100 ಕಿ.ಮೀ. ಅಂತರದಲ್ಲಿದೆ. ಹೀಗಾಗಿ ಈ ಘಟನೆಯಿಂದ ರಾಜ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
Advertisement
Advertisement
ವಿಧಾನಸಭಾ ಚುನಾವಣೆ ಮುಂದಿನ ವಾರದಲ್ಲಿ ಪ್ರಾರಂಭವಾಗಲಿದೆ. ಮೊದಲ ಹಂತದ ಚುನಾವಣೆ ನವೆಂಬರ್ 12ರಂದು ಹಾಗೂ ಎರಡನೇ ಹಂತದ ಚುನಾವಣೆ 20ರಂದು ನಡೆಯಲಿದೆ. ಹೀಗಿರುವಾಗ ಮಾವೋವಾದಿಗಳು ದಾಳಿ ಮಾಡುತ್ತಿದ್ದು, ಸಾಮಾನ್ಯ ಜನರು ಸೇರಿದಂತೆ ರಕ್ಷಣಾ ಸಿಬ್ಬಂದಿ ಹತ್ಯೆಯಾಗುತ್ತಿದ್ದಾರೆ. ಕಳೆದ 8 ದಿನಗಳ ಹಿಂದೆಯಷ್ಟೇ ಛತ್ತೀಸಗಢ್‍ದ ಇಬ್ಬರು ಪೊಲೀಸರು ಹಾಗೂ ದೂರದರ್ಶನದ ಕ್ಯಾಮೆರಾಮನ್ ಮಾವೋವಾದಿಗಳ ಗುಂಡಿಗೆ ಬಲಿಯಾಗಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
1 CISF jawan&4 civilians lost their lives&2 injured in the attack today. Morale of the forces will not be affected due to such attacks. The upcoming assembly elections will be conducted peacefully:V Sinha, IG Bastar: Visuals from the site of naxal attack near Bacheli,Chhattisgarh pic.twitter.com/XLLvGZY8bt
— ANI (@ANI) November 8, 2018