ಚೆನ್ನೈ: ತಮಿಳುನಾಡಿನ ರಾಮೇಶ್ವರಂ ಬಳಿ ಭೀಕರ ಅಪಘಾತ (Rameswaram Road Accident) ಸಂಭವಿಸಿದೆ. ರಾಮನಾಥಪುರಂ ಬಳಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿಗೆ ಲಾರಿಯೊಂಡು ಡಿಕ್ಕಿ ಹೊಡೆದ ಪರಿಣಾಮ ಐವರು ಅಯ್ಯಪ್ಪ ಭಕ್ತರು ದಾರುಣ ಸಾವನ್ನಪ್ಪಿದ್ದಾರೆ.
ಮೃತರನ್ನ ವಂಗರ ರಾಮಕೃಷ್ಣ (51), ಮಾರ್ಪಿನ ಅಪ್ಪಲನಾಯ್ಡು (33), ರಾಮು (50), ಮರುಪಲ್ಲಿಯ ಬಂಡಾರು ಚಂದ್ರರಾವ್ (35) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗಿನಜಾವ 2:15ಕ್ಕೆ ಘಟನೆ ನಡೆದಿದ್ದು, ಘಟನೆಯಲ್ಲಿ ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಚಿಕಿತ್ಸೆಗಾಗಿ ರಾಮನಾಥಪುರಂ ಸರ್ಕಾರಿ ಆಸ್ಪತ್ರೆಗೆ (Government Hospital) ದಾಖಲಿಸಲಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಇದನ್ನೂ ಓದಿ: ಜೈಲಲ್ಲಿ ಮಾದಕ ವಸ್ತು ನಿರ್ಬಂಧಿಸಿದ್ದಕ್ಕೆ ರೌಡಿಗಳಿಂದ ಕಿರಿಕ್ – ಜೈಲರ್ ಸೇರಿ ಮೂವರು ಆಸ್ಪತ್ರೆ ಪಾಲು
ಮೃತರನ್ನು ವಿಜಯನಗರ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳ ಅಯ್ಯಪ್ಪ ಭಕ್ತರು ಎಂದು ಗುರುತಿಸಲಾಗಿದೆ. ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದು ರಾಮೇಶ್ವರಂ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ರಸ್ತೆ ಅಪಘಾತದ ಬಗ್ಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ತೀವ್ರ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಗೃಹ ಸಚಿವೆ ಅನಿತಾ ಅಧಿಕಾರಿಗಳನ್ನ ವಿಚಾರಿಸಿ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: ಬಂಗಾಳದಲ್ಲಿಂದು ಬಾಬರಿ ಶೈಲಿಯ ಮಸೀದಿಗೆ ಶಿಲಾನ್ಯಾಸ – ಭದ್ರತೆಗೆ ಬಿಎಸ್‌ಎಫ್ ನಿಯೋಜನೆ


