ಮಂಗಳೂರು: ಮಂಗಳೂರು (Mangaluru) ಹೊರವಲಯದ ಉಳ್ಳಾಲ (Ullal) ಸಮುದ್ರದಲ್ಲಿ ಮೀನು ಹಿಡಿಯಲು ಹೋಗಿದ್ದ ದೋಣಿ ಕಲ್ಲುಬಂಡೆಗೆ ಡಿಕ್ಕಿಯಾಗಿ ದೋಣಿಯಲ್ಲಿ (Boat) ಮುಳುಗುತ್ತಿದ್ದ 5 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಉತ್ತರ ಪ್ರದೇಶದ ಸಮರ ಬಹುದ್ದೂರ್, ರಾಮ್ ಮನೋಜ್, ರೋಹಿತ್, ಪ್ರಕಾಶ್, ವಾಸು ಬೋಟ್‌ನಲ್ಲಿದ್ದ ಮೀನುಗಾರರು. ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುತ್ತಿದ್ದ ಟ್ರಾಲ್‌ಬೋಟ್‌ಗೆ ಕಲ್ಲುಬಂಡೆ ತಾಗಿ ಪ್ರೊಫೈಲರ್ ಸ್ಥಗಿತವಾದ ಕಾರಣ ಅವಘಡ ಸಂಭವಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಸಂಸದನ ದೇಶ ವಿಭಜನೆ ಹೇಳಿಕೆ – ಸೋನಿಯಾ ಗಾಂಧಿ ಭಾರತೀಯರ ಕ್ಷಮೆಯಾಚಿಸಲಿ: ಜೋಶಿ ಆಗ್ರಹ
Advertisement
Advertisement
ಉಳ್ಳಾಲ ನಿವಾಸಿಯಾದ ನಯನಾ ಪಿ.ಸುವರ್ಣ ಅವರಿಗೆ ಸೇರಿದ ‘ನವಾಮಿ-ಶಿವಾನಿ’ ಎಂಬ ಬೋಟ್ ಮೀನುಗಾರಿಕೆಗೆ ತೆರಳಿ ವಾಪಸ್ಸಾಗುತ್ತಿತ್ತು. ನಯನಾ ಪತಿ ಪ್ರವೀಣ್ ಸುವರ್ಣ ಬೋಟ್ ಅನ್ನು ಚಲಾಯಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಬೋಟ್‌ಗೆ ಕಲ್ಲುಬಂಡೆ ತಾಗಿ ನೀರಿನಲ್ಲಿ ಮುಳುಗುತ್ತಿತ್ತು. ಈ ವೇಳೆ ವಿಷಯ ತಿಳಿದ ಮತ್ತೊಂದು ಬೋಟ್‌ನಲ್ಲಿದ್ದ ರಾಮ ಸುವರ್ಣ ಮತ್ತು ಯತೀಶ್ ಸುವರ್ಣ ಎಂಬವರು ನಾಡದೋಣಿಯಲ್ಲಿ ಬಂದು ಮೂವರನ್ನು ರಕ್ಷಿಸಿದ್ದಾರೆ. ಬಳಿಕ ಪ್ರಕಾಶ್ ಖಾರ್ವಿ ಮಾಲೀಕತ್ವದ ದುರ್ಗಾ ಲಕ್ಷ್ಮಿ ದೋಣಿ ಮತ್ತು ಮನೋಜ್ ಖಾರ್ವಿ ಮಾಲೀಕತ್ವದ ಶ್ರೀಗೌರಿ ದೋಣಿಯ ಮೀನುಗಾರರು ಬಂದು ಉಳಿದ ಇಬ್ಬರ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಸುಮಲತಾರಿಂದ ಅಂತರ ಕಾಯ್ದುಕೊಂಡ್ರಾ ಆಪ್ತ ಸಚ್ಚಿದಾನಂದ?
Advertisement
Advertisement
ಮುಳುಗಡೆಯಾಗಿರುವ ದೋಣಿಯಲ್ಲಿದ್ದ ಮೀನುಗಳು ಮತ್ತು ಮೀನು ಬಲೆ ಸಮುದ್ರದ ಪಾಲಾಗಿದೆ. ಇದರಿಂದ ಮಾಲೀಕರಿಗೆ ಲಕ್ಷಾಂತರ ರೂಪಾಯಿಯಷ್ಟು ನಷ್ಟವಾಗಿದೆ. ಇದನ್ನೂ ಓದಿ: ಕಲ್ಲು ಹೊಡೆದುಕೊಂಡು ಇದ್ದೋರನ್ನ ಲೋಕಸಭೆಗೆ ಕಳುಹಿಸಿದ್ರೆ ಇನ್ನೇನಾಗುತ್ತೆ: ಡಿ.ಕೆ.ಸುರೇಶ್‌ಗೆ ಹೆಚ್‌ಡಿಕೆ ತಿರುಗೇಟು