-ಇತ್ತ ಮಂಗ್ಳೂರಲ್ಲಿ ಫಿಶಿಂಗ್ ಬೋಟ್ ರಕ್ಷಣೆ
ಕಾರವಾರ/ಮಂಗಳೂರು: ಇಂಜಿನ್ ಬಂದ್ ಆಗಿ ರಾಜ್ಯದ ಮೀನುಗಾರರು ಗೋವಾ ರಾಜ್ಯದ ಲೋಲೆಮ್ ಬಳಿ ಆಳಸಮುದ್ರದಲ್ಲಿ ಸಿಲುಕಿಕೊಂಡಿದ್ದಾರೆ.
ಮೀನುಗಾರರು ಉಡುಪಿ ಮೂಲದ ರಾಜ್ ಕಿರಣ್ ಎನ್ನುವ ಬೋಟ್‍ನಲ್ಲಿದ್ದರು. ಬೋಟ್‍ನಲ್ಲಿ ರಾಜ್ಯದ ಎಂಟು ಜನ ಮೀನುಗಾರರು ಇದ್ದರು. ಉಡುಪಿಯಿಂದ ಮೀನುಗಾರಿಕೆಗೆ ಗೋವಾಕ್ಕೆ ತೆರಳುವಾಗ ಇಂಜಿನ್ ಬಂದ್ ಆಗಿ ಸಿಲುಕಿಕೊಂಡಿದ್ದರು.
Advertisement
Advertisement
ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಇರುವ ಹಿನ್ನೆಲೆಯಲ್ಲಿ ಮೀನುಗಾರರು ಆತಂಕಕ್ಕೊಳಗಾಗಿದ್ದಾರೆ. ಕರಾವಳಿ ಕಾವಲು ಪಡೆ ಅಧಿಕಾರಿಗಳು ಬೋಟ್ ದಡಕ್ಕೆ ತರುಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ರಾಜ್ಯದ ಅಧಿಕಾರಿಗಳು ಗೋವಾ ರಾಜ್ಯದ ಅಧಿಕಾರಿಗಳೊಂದಿಗೆ ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ.
Advertisement
ಇತ್ತ ಮಂಗಳೂರಿನಲ್ಲಿ ಚಂಡಮಾರುತಕ್ಕೆ ಸಿಲುಕಿದ್ದ ನೂರಕ್ಕೂ ಹೆಚ್ಚು ಫಿಶಿಂಗ್ ಬೋಟ್‍ಗಳನ್ನು ರಕ್ಷಿಸಲಾಗಿದೆ. ಮಂಗಳೂರಿನ ಎನ್‍ಎಂಪಿಟಿ ಬಂದರಿನಲ್ಲಿ ಬೋಟ್ ಗಳಿಗೆ ಆಶ್ರಯ ನೀಡಲಾಗಿದ್ದು, ನವಬಂದರು ಯಾರ್ಡ್ ನಲ್ಲಿ ಸುರಕ್ಷಿತ ಲಂಗಾರು ಹಾಕಲಾಗಿದೆ.
Advertisement
ಸಮುದ್ರದಿಂದ ವಾಪಸಾಗುತ್ತಿದ್ದ ವೇಳೆ ಬೋಟ್‍ಗಳು ಬಿರುಗಾಳಿಗೆ ಸಿಲುಕಿದ್ದವು. ಸದ್ಯ ಬೋಟ್ ಗಳಲ್ಲಿದ್ದ ಸಾವಿರಕ್ಕೂ ಮಿಕ್ಕಿ ಮೀನುಗಾರರಿಗೆ ಬಂದರು ಯಾರ್ಡ್ ನಲ್ಲಿ ಆಶ್ರಯ ನೀಡಲಾಗಿದೆ. ಚಂಡಮಾರುತ ಪರಿಣಾಮ ತೀರಕ್ಕೆ ಬರಲಾಗದೆ ಮೀನುಗಾರರು ಪರದಾಡಿದ್ದರು. ಈ ವೇಳೆ ಕೋಸ್ಟ್ ಗಾರ್ಡ್ ಪಡೆಗಳು ಬೋಟ್‍ಗಳನ್ನು ರಕ್ಷಣೆ ಮಾಡಿವೆ.