ಮುಂಬೈ: 30 ಕೆಜಿ ತೂಕದ ಮೀನೊಂದು ಬರೋಬ್ಬರಿ 5.50 ಲಕ್ಷ ರೂಪಾಯಿಗೆ ಮಾರಾಟವಾಗುವ ಮೂಲಕ ಮೀನುಗಾರ ಸಹೋದರರಿಗೆ ಬಂಪರ್ ಲಾಟರಿ ಸಿಕ್ಕಿದೆ.
ಹೌದು. ಪಾಲ್ಗರ್ ನ ಮಹೇಶ್ ಮೆಹರ್ ಮತ್ತು ಭರತ್ ಮೆಹರ್ ಮೀನುಗಾರರು ಬಂಪರ್ ಲಾಟರಿ ಹೊಡೆದಿದ್ದಾರೆ. ಇವರು ಎಂದಿನಂತೆ ಕಳೆದ ಶನಿವಾರವು ಸಹ ಮೀನನ್ನು ಹಿಡಿಯಲು ಸಮುದ್ರಕ್ಕೆ ತೆರಳಿದ್ದಾಗ ಬಲು ಅಪರೂಪದ ಮೀನಾಗಿರುವ ಗೋಲ್ ಫಿಶ್ ಇವರ ಬಲೆಗೆ ಬಿದ್ದಿದೆ.
Advertisement
ಗೋಲ್ ಫಿಶ್ ಸಿಕ್ಕ ವಿಷಯ ತಿಳಿಯುತ್ತಿದ್ದಂತೆ ಖರೀದಿದಾರರು ಮೀನನ್ನು ಖರೀದಿಸಲು ಮುಂದಾಗಿದ್ದಾರೆ. ಸೋಮವಾರ ಬೆಳಗ್ಗೆ ದೋಣಿ ಸಮುದ್ರ ದಂಡೆಗೆ ಬರುತ್ತಲೇ ಮೀನು ಕೊಳ್ಳಲು ಹರಾಜು ಕೂಡ ನಡೆಯಿತು. 20 ನಿಮಿಷಗಳ ಬಿಡ್ಡಿಂಗ್ ನಲ್ಲಿ ಮೀನು 5.50 ಲಕ್ಷ ರೂ.ಗೆ ಮಾರಾಟವಾಯಿತು.
Advertisement
Advertisement
ಏನಿದು ಗೋಲ್ ಫಿಶ್? ಯಾಕಿಷ್ಟು ದುಬಾರಿ?
ಗೋಲ್ ಫಿಶ್ ಬರಿ ಮೀನಲ್ಲ. ಮೀನಿನ ರೂಪದಲ್ಲಿರುವ ಐಶ್ವರ್ಯ ಎನ್ನುತ್ತಾರೆ ಕರಾವಳಿಯ ಮೀನುಗಾರರು. ಗೋಲ್ ಫಿಶ್ ಅದೆಷ್ಟು ರುಚಿಕಟ್ಟಾಗಿರುತ್ತದೋ, ತನ್ನ ಒಡಲಲ್ಲಿ ಅಷ್ಟೇ ಅಮೂಲ್ಯ ಅಂಗಾಂಗಗಳನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಈ ಮೀನು ಮೀನುಗಾರರ ಕುಟುಂಬಗಳಿಗೆ ಐಶ್ವರ್ಯದ ಸಂಕೇತವಾಗಿದೆ.
Advertisement
ಮಾಂಸ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 450 ರಿಂದ 600 ರೂಪಾಯಿಗಳಿಗೆ ಗೋಲ್ ಫಿಶ್ ಮಾರಾಟವಾಗುತ್ತದೆ. ಆದರೆ ಗೋಲ್ ಮೀನಿಗೆ ಪೂರ್ವ ಏಷ್ಯಾ ರಾಷ್ಟ್ರಗಳಾದ ಸಿಂಗಾಪುರ್, ಮಲೇಷ್ಯಾ, ಥಾಯ್‍ಲೆಂಡ್‍ಗಳಲ್ಲಿ ಭಾರಿ ಬೇಡಿಕೆ ಇದೆ. ಇದರ ಅಂಗಾಂಗಗಳನ್ನು ಔಷಧಕ್ಕೆ ಬಳಸಲಾಗುತ್ತದೆ. ಇದರ ಹೃದಯವನ್ನು `ಸಮುದ್ರ ಬಂಗಾರ’ ಎಂದೂ ಕರೆಯಲಾಗುತ್ತದೆ.
2012ರಲ್ಲಿ ಮೀನುಗಾರರ ತಂಡವೊಂದು 380 ಗೋಲ್ ಮೀನುಗಳನ್ನು ಹಿಡಿಸಿದ್ದರು. ಅದನ್ನು ಬರೋಬ್ಬರಿ 80 ಲಕ್ಷಕ್ಕೆ ಮಾರಾಟವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews