ಮೀನು ಎಲ್ಲರಿಗೂ ಆರೋಗ್ಯಕರವಾದ ಆಹಾರವಾಗಿದೆ. ಹೀಗಾಗಿ ಕೆಲ ಮಂದಿ ಪ್ರತಿವಾರ ಸಂಡೇ ಬಂದರೆ ಚಿಕನ್, ಮಟನ್, ಮಾಡಿ ತಿನ್ನುತ್ತಿರುತ್ತಾರೆ. ಇಲ್ಲಿ ಎರಡು ಬಗೆಯ ಮೀನಿನ ಖಾದ್ಯವನ್ನು ತಯಾರಿಸುವ ವಿಧಾನದ ಮಾಹಿತಿಯನ್ನು ನೀಡಲಾಗಿದೆ.
ಬೇಕಾಗುವ ಸಾಮಾಗ್ರಿಗಳು
1. ಕ್ಲೀನ್ ಮಾಡಿ ಸ್ಲೈಸ್ ಮಾಡಿದ ಫಿಶ್ – ಅರ್ಧ ಕೆಜಿ
2. ಖಾರದ ಪುಡಿ – 1 ಚಮಚ
3. ದನಿಯಾ ಪುಡಿ – 1 ಚಮಚ
4. ಅರಿಶಿಣ ಪುಡಿ – ಚಿಟಿಕೆ
5. ಕಾಳು ಮೆಣಸಿನ ಪುಡಿ – 1 ಚಮಚ
6. ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
7. ಉಪ್ಪು – ರುಚಿಗೆ ತಕ್ಕಷ್ಟು
8. ಕರಿಬೇವಿನ ಸೊಪ್ಪು
9. ನಿಂಬೆಹಣ್ಣು – ಅರ್ಧ ಹೋಳು
10. ನೀರು – 1 ಚಮಚ
11. ಎಣ್ಣೆ – 3-4 ಚಮಚ
Advertisement
Advertisement
ಮಾಡುವ ವಿಧಾನ
* ಒಂದು ಬೌಲ್‍ಗೆ ಖಾರದಪುಡಿ, ದನಿಯಾ ಪುಡಿ, ಅರಿಶಿಣ ಪುಡಿ, ಕಾಳು ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕರಿಬೇವಿನ ಸೊಪ್ಪು ಸಣ್ಣಗೆ ಹೆಚ್ಚಿದ್ದು, ಅರ್ಧ ನಿಂಬೆಹಣ್ಣು ಹಿಂಡಿ 1 ಚಮಚ ನೀರು ಸೇರಿಸಿ ಮೀನಿಗೆ ಲೇಪಿಸುವಷ್ಟು ಗಟ್ಟಿ ಇರುವಂತೆ ಕಲಸಿಕೊಳ್ಳಿ. ತುಂಬಾ ನೀರು ಮಾಡಿಕೊಳ್ಳಬೇಡಿ.
* ಬಳಿಕ ಮೀನಿನ 2 ಭಾಗಕ್ಕೆ ಮಿಶ್ರಣ ಲೇಪಿಸಿ ಅರ್ಧ ಗಂಟೆ ಕಾಲ ಇಟ್ಟುಬಿಡಿ. ನೆನಸಿಡಿ.
* ಬಳಿಕ ಒಂದು ಪ್ಯಾನ್‍ಗೆ 3-4 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮಸಾಲೆ ಹಾಕಿದ್ದ ಫಿಶ್ ಹಾಕಿ 2 ಕಡೆ ಚೆನ್ನಾಗಿ ಫ್ರೈ ಮಾಡಿ. ಈರುಳ್ಳಿ, ನಿಂಬೆಹಣ್ಣಿನ ಜೊತೆಗ ಸವಿಯಿರಿ..
Advertisement
Advertisement
ಈ ಫಿಶ್ ಫ್ರೈ ಅನ್ನು ಮತ್ತೊಂದು ವಿಧಾನದಲ್ಲೂ ಮಾಡಬಹುದು
* ಮೊದಲಿಗೆ ಚೆನ್ನಾಗಿ ಕ್ಲೀನ್ ಮಾಡಿದ ಸ್ಲೈಸ್ ಕಟ್ ಮಾಡಿದ ಮೀನಿಗೆ ಅರಿಶಿಣ ಸ್ವಲ್ಪ, ಉಪ್ಪು ಸೇರಿಸಿ ಎರಡೂ ಕಡೆ ಲೇಪಿಸಿ 10ರಿಂದ 15 ನಿಮಿಷ ಇಡಿ.
* ಹೀಗೆ ಮಾಡುವುದರಿಂದ ಫಿಶ್‍ನಲ್ಲಿನ ವಾಸನೆ ಕಡಿಮೆ ಆಗುತ್ತದೆ ಜೊತೆಗೆ ರುಚಿಯೂ ಹೆಚ್ಚಿರುತ್ತದೆ.
* ಈಗ ಒಂದು ಬೌಲ್‍ಗೆ ಖಾರದಪುಡಿ, ಧನಿಯಾ ಪುಡಿ, ಅರಿಶಿಣ ಪುಡಿ, ಕಾಳು ಮೆಣಸಿನ ಪುಡಿ, ಶುಂಠಿ – ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕರಿಬೇವಿನ ಸೊಪ್ಪು ಸಣ್ಣಗೆ ಹೆಚ್ಚಿದ್ದು, ಅರ್ಧ ನಿಂಬೆಹಣ್ಣು ಹಿಂಡಿ 1 ಚಮಚ ನೀರು ಸೇರಿಸಿ ಮೀನಿಗೆ ಲೇಪಿಸುವಷ್ಟು ಗಟ್ಟಿ ಇರುವಂತೆ ಕಲಸಿಕೊಳ್ಳಿ. (ಈ ಮೊದಲೇ ಫಿಶ್‍ಗೂ ಉಪ್ಪು ಹಾಕಿರುವುದರಿಂದ ನೋಡಿಕೊಂಡು ಉಪ್ಪು ಸೇರಿಸಿ)
* ಬಳಿಕ ಮೊದಲೇ ಅರಿಶಿಣ ಉಪ್ಪು ಹಚ್ಚಿಟ್ಟಿದ್ದ ಮೀನಿನ 2 ಭಾಗಕ್ಕೆ ಮಿಶ್ರಣ ಲೇಪಿಸಿ 5 ರಿಂದ 10 ನಿಮಿಷಗಳ ಕಾಲ ಮ್ಯಾರಿನೇಟ್ ಮಾಡಿ. ನೆನಸಿಡಿ.
* ಬಳಿಕ ಒಂದು ಪ್ಯಾನ್‍ಗೆ 3-4 ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮ್ಯಾರಿನೇಟ್ ಮಾಡಿದ ಫಿಶ್ ಹಾಕಿ 2 ಕಡೆ ಚೆನ್ನಾಗಿ ಫ್ರೈ ಮಾಡಿ. ಈರುಳ್ಳಿ, ನಿಂಬೆಹಣ್ಣಿನ ಜೊತೆಗ ಸವಿಯಿರಿ.
* ಇದು ಫಿಶ್ ಫ್ರೈ ಅನ್ನು ಸೈಡ್ ಡಿಶ್ ಆಗಿಯೂ ಬಳಸಬಹುದು..
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv