ಕೋಲ್ಕತ್ತಾ: ಕಳೆದ 10 ವರ್ಷಗಳಲ್ಲಿ ಗಂಗಾನದಿಯಲ್ಲಿ ಮೀನಿನ ವೈವಿಧ್ಯತೆ ಸುಧಾರಿಸಿದ್ದು, ಇದೇ ಮೊದಲ ಬಾರಿಗೆ ವೈವಿಧ್ಯತೆಯಲ್ಲಿ ಶೇ.36 ರಷ್ಟು ಹೆಚ್ಚಾಗಿದೆ. ಅಳಿವಿನ ಅಂಚಿನಲ್ಲಿದ್ದ ಶೇ.90 ರಷ್ಟು ಪ್ರಬೇಧಗಳು ಪುನರಾಗಮನ ಮಾಡುತ್ತಿವೆ ಎಂದು ವರದಿ ಹೇಳಿದೆ.
ಗಂಗಾನದಿಯಲ್ಲಿ ನೀರಿನ ಗುಣಮಟ್ಟ ಸುಧಾರಿಸಲು ಸ್ಥಳೀಯ ಮೀನುಗಾರರಿಂದ ಬಲೆ ಬೀಸುವುದನ್ನು ತಪ್ಪಿಸಲಾಗಿದೆ. ಅಲ್ಲದೆ ಗಂಗಾನದಿಯ ಉಪನದಿಗಳ ಉದ್ದಕ್ಕೂ ವೈವಿಧ್ಯತೆಯ ಅಧ್ಯಯನ ನಡೆಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಇದನ್ನೂ ಓದಿ; 7 ಬಾರಿ ಗುಂಡೇಟು ತಿಂದಿದ್ದ ಅಧಿಕಾರಿ UPSCಯಲ್ಲಿ ಪಾಸ್
Advertisement
Advertisement
ಈ ಹಿಂದೆ ಕಾನ್ಪುರ ಮತ್ತು ಫರಕ್ಕಾ ನಡುವೆ 79 ಮೀನಿನ ಪ್ರಭೇದಗಳನ್ನು ಪತ್ತೆ ಮಾಡಲಾಗಿತ್ತು. ಆದರೆ ಇತ್ತೀಚಿನ ಅಧ್ಯಯನವು 103 ಪ್ರಭೇದದ ಮೀನುಗಳಿರುವುದಾಗಿ ಖಾತ್ರಿ ಪಡಿಸಿದೆ. ಬಂಗಾಳದ ಫರಕ್ಕಾದಿಂದ ಟ್ರಿಬೇನಿಯವರೆಗಿನ ವಲಯದಲ್ಲಿ 123 ಪ್ರಭೇದಗಳು, ಸಿಹಿ ನೀರಿನ ಉಬ್ಬರವಿಳಿತದ ವಲಯದಲ್ಲಿ ಚೆಲ್ಲಾ, ಮೊರಾರಿ, ಗಂಗಾ ನದಿ ಸ್ಪ್ರಾಟ್ ಸೇರಿದಂತೆ 72 ಬಗೆಯ ಪ್ರಭೇದದ ಮೀನುಗಳು ಪತ್ತೆಯಾಗಿವೆ. ಇದರೊಂದಿಗೆ ಹಿಲ್ಸಾ, ಕಜ್ರಿ ಅಥವಾ ಸುತ್ರಿ, ವಾಚಾ, ಗರುವಾ ಮತ್ತು ಮೊರಾರಿ ಅಥವಾ ಪಿಯಾಲಿ ಪ್ರಭೇದದ ಮೀನುಗಳು ಪುನರುಜ್ಜೀವನ ಪಡೆದುಕೊಂಡಿವೆ ಎಂದು ಅಧ್ಯಯನ ದೃಢಪಡಿಸಿದೆ. ಇದನ್ನೂ ಓದಿ: ರಜೆ ಬೇಕೆಂದ್ರೆ ಲಾಡ್ಜ್‌ಗೆ ಬನ್ನಿ – ಮಹಿಳಾ ನೌಕರರಿಗೆ ಎಸ್‌ಪಿ ಕಚೇರಿ ಅಧಿಕಾರಿಯಿಂದ ಕಿರುಕುಳ
Advertisement
Advertisement
ಈ ನಡುವೆ ಕೇಂದ್ರ ಒಳನಾಡು ಮೀನುಗಾರಿಗೆ ಸಂಶೋಧನಾ ಸಂಸ್ಥೆ (CIFRI) ಅಧಿಕಾರಿಗಳು, ದಾಖಲೆಗಳಿಂದ ಹೆಸರಿಲ್ಲ ಮೀನುಗಳು ಸಂಪೂರ್ಣವಾಗಿ ಅಳಿದುಹೋಗಿಲ್ಲ. ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆಯಾಗಿರಬಹುದು ಎಂದು ತಿಳಿಸಿದ್ದಾರೆ.