ನವದೆಹಲಿ: ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಮತ್ತಷ್ಟು ವೃದ್ಧಿಸುತ್ತಿದ್ದು ಇದೇ ಮೊದಲ ಬಾರಿಗೆ ಅಮೆರಿಕದ ತೈಲ ಭಾರತಕ್ಕೆ ಬಂದಿದೆ. ಸುಮಾರು 1.6 ದಶಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಹೊತ್ತು ತಂದಿದ ಸರಕು ಸಾಗಾಟ ಹಡಗು ಒಡಿಶಾ ಬಂದರಿಗೆ ಆಗಮಿಸಿದೆ.
ಭಾರತ ತೈಲ ಕರ್ಪೋರೆಷನ್(ಐಒಸಿ) ಜುಲೈ ತಿಂಗಳಿನಲ್ಲಿ ತೈಲ ಖರೀದಿ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಇದರೊಂದಿಗೆ ಭಾರತ್ ಪೆಟ್ರೋಲಿಯಂ ಕರ್ಪೋರೆಷನ್ ಲಿಮಿಟೆಡ್(ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ(ಎಚ್ಪಿಸಿಎಲ್) ಕಂಪನಿಗಳು ಅಮೆರಿಕದಿಂದ ಅಮದುಕೊಳ್ಳಲಾಗಿರುವ ಕಚ್ಚಾ ತೈಲವನ್ನು ಖರೀದಿಸಲೂ ಮುಂದಾಗಿವೆ. ಅಲ್ಲದೇ ಕೆನಡಾ ದೇಶದಿಂದಲೂ ತೈಲವನ್ನು ಖರೀದಿಸಲು ಚಿಂತನೆಯನ್ನು ಮಾಡಲಾಗಿದೆ.
Advertisement
ಐಒಸಿ ಮತ್ತು ಸರ್ಕಾರಿ ಸ್ವಾಮ್ಯದ ಬಿಪಿಸಿಎಲ್ ತೈಲ ಸಂಸ್ಥೆಗಳು 2018 ಮಾರ್ಚ್ ವೇಳೆಗೆ ಸುಮಾರು 8 ಹಡಗುಗಳ ತೈಲವನ್ನು ಖರೀದಿಸುವ ಆಶ್ವಾಸನೆಯನ್ನು ನೀಡಿವೆ ಎಂದು ಅಮೇರಿಕ ಇಂಧನ ಅಧಿಕಾರಿಗಳು ತಿಳಿಸಿದ್ದಾರೆ.
Advertisement
The first US crude oil cargo of 1.6 million barrels bought by Indian Oil Corporation from the US has been received at Paradip port today. pic.twitter.com/NEzL6rtgJd
— Indian Oil Corp Ltd (@IndianOilcl) October 2, 2017
Advertisement
ಈಗಾಗಲೇ ಅಮೇರಿಕದಿಂದ ಮತ್ತೊಂದು ಹಡಗು ಕಚ್ಚಾ ತೈಲವನ್ನು ಖರೀದಿಸಲು ಬುಕ್ ಮಾಡಲಾಗಿದ್ದು ಶೀಘ್ರವೇ ಅದು ಗುಜರಾತ್‍ನ ವಾಡಿನಾರ್ ಬಂದರಿಗೆ ಬರಲಿದೆ. ಪ್ರತಿ ತಿಂಗಳು ಒಂದು ಹಡಗು ಕಚ್ಚಾ ತೈಲವನ್ನು ಖರೀದಿಸಿಲು ನಿರ್ಧರಿಸಿದ್ದೇವೆ ಎಂದು ಐಒಸಿ ಉಖ್ಯಸ್ಥ ಸಂಜೀವ್ ಸಿಂಗ್ ಹೇಳಿದರು.
Advertisement
ಮೊದಲ ಟೆಂಡರ್‍ನಲ್ಲಿ ಸುಮಾರು 1.6 ಮಿಲಿಯನ್ ಬ್ಯಾರಲ್ ಉತ್ತಮ ಗುಣಮಟ್ಟದ ಸಲ್ಫರ್ ಕಚ್ಚಾ ತೈಲವನ್ನು ಅಮೆರಿಕದಿಂದ ಖರೀದಿ ಮಾಡುತ್ತಿದ್ದೇವೆ, ಕೆನಡಾ ದೇಶದಿಂದ 4 ಸಾವಿರ ಬ್ಯಾರಲ್ ತೈಲವನ್ನು ಖರೀದಿಸುತ್ತಿದ್ದೇವೆ. ಎರಡನೇ ಟೆಂಡರ್‍ನಲ್ಲಿ 1.9 ಮಿಲಿಯನ್ ಬ್ಯಾರಲ್ ಅಮೇರಿಕದಿಂದ ಖರೀದಿಸುತ್ತಿದ್ದೇವೆ ಇದರಲ್ಲಿ ಸುಮಾರು ಅರ್ಧದಷ್ಟು ಶೇಲ್ ಆಯಿಲ್ ಅಮದು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
Symbolic crude being presented to JS (IC) MOP&NG by Mr. Anish Aggarwal, Director Pipelines, IndianOil pic.twitter.com/o0FqrLAJYJ
— Indian Oil Corp Ltd (@IndianOilcl) October 2, 2017
ಕಳೆದ ಬಾರಿ ಪ್ರಧಾನಿ ಮೋದಿ ಅಮೆರಿಕ ಭೇಟಿಯ ವೇಳೆ ಕೈಗೊಂಡಿದ್ದ ಒಪ್ಪಂದ ಮೂಲಕ ತೈಲವನ್ನು ಅಮದು ಮಾಡಿಕೊಳ್ಳಲಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಹೆಚ್ಚಿನ ತೈಲವನ್ನು ರಫ್ತು ಮಾಡುವ ಆಶ್ವಾಸನೆಯನ್ನು ನೀಡಿದ್ದರು.
ಆಮದು ಮಾಡ್ತಿರೋದು ಯಾಕೆ?
ಭಾರತವು ಜಗತ್ತಿನಲ್ಲಿ ಮೂರನೇ ಅತೀ ಹೆಚ್ಚು ಕಚ್ಚಾ ತೈಲವನ್ನು ಅಮದು ಮಾಡಿಕೊಳ್ಳುವ ರಾಷ್ಟ್ರವಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆ ಕಡಿಮೆಯಾಗಿರುವುದರಿಂದ ಪರ್ಯಾಯ ಮಾರ್ಗವಾಗಿ ಅಮೆರಿಕದಿಂದ ತೈಲ ಖರೀದಿ ನಡೆಸುತ್ತಿದೆ. ಭಾರತ ಸೇರಿದಂತೆ ದಕ್ಷಿಣ ಕೊರಿಯ, ಜಪಾನ್, ಚೀನಾ ದೇಶಗಳು ಅಮೆರಿಕದಿಂದ ಕಚ್ಚಾ ತೈಲವನ್ನು ಅಮದು ಮಾಡಿಕೊಳ್ಳುತ್ತಿವೆ. ಪೆಟ್ರೋಲ್ ರಫ್ತು ಮಾಡುವ ರಾಷ್ಟ್ರಗಳ ಸಂಘಟೆಯಾದ ಒಪೆಕ್ ತೈಲ ಉತ್ಪಾದನೆಯನ್ನು ಕಡಿತಗೊಳಿಸಿದೆ. ಇದರಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದೆ ಮೊದಲ ಬಾರಿಗೆ ಅಮೆರಿಕದಿಂದ ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ.
Strategic and economic benefits of US crude for Paradip port. pic.twitter.com/ssSlplaHWc
— Indian Oil Corp Ltd (@IndianOilcl) October 2, 2017
ಯಾವ ಕಂಪೆನಿಗೆ ಎಷ್ಟು ಪಾಲು?
ಬಿಪಿಸಿಎಲ್- 500 ಬ್ಯಾರಲ್ ಸಾಮರ್ಥ್ಯದ 2 ಹಡಗುಗಳ ಕಚ್ಚಾತೈಲ ಕೊಚ್ಚಿ ಬಂದರಿಗೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 15ರ ವೇಳೆಗೆ ಬರಲಿದ್ದು, ಒಂದು ಮಿಲಿಯನ್ ಸ್ವಿಟ್ ಕಚ್ಚಾ ತೈಲ ಅಕ್ಟೋಬರ್‍ನಲ್ಲಿ ಬರಲಿದೆ. ಎಸ್‍ಪಿಸಿಎಲ್ ಒಂದು ಮಿಲಿಯನ್ ಕಚ್ಚಾತೈಲವನ್ನು ವಿಶಾಖಪಟ್ಟಣ ಬಂದರಿನಲ್ಲಿ ಅಮದು ಮಾಡಿಕೊಳ್ಳಲಿದೆ. ಬಿಒಆರ್‍ಎಲ್ ಒಂದು ಲಕ್ಷ ಬ್ಯಾರಲ್ ತೈಲವನ್ನು ಸಿಂಗಾಪುರ ಕಂಪೆನಿಯಿಂದ ಅಮದು ಮಾಡಿಕೊಳ್ಳಲಿವೆ.
A historic milestone in #USIndia relations! Honored to witness the arrival of shipment of US crude oil to India at Paradip Port in #Odisha pic.twitter.com/GdZv5lTj8H
— Jennifer Larson (@USCGHyderabad) October 2, 2017