ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ (Pahalgam Terror Attack) ಭಾರತ ಕೊನೆಗೂ ಪ್ರತೀಕಾರ ತೀರಿಸಿಕೊಂಡಿದೆ. ರಾತ್ರೀ ರಾತ್ರಿ ಪಾಕಿಸ್ತಾನದ 9 ಉಗ್ರರ ಅಡಗುತಾಣಗಳ ಮೇಲೆ ಸಸ್ಪೆನ್ಸ್ ದಾಳಿ ನಡೆಸಿದ್ದು, ಸುಮಾರು 70ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈದಿದೆ.
ये नया भारत है, घर में घुसकर मरेगा।#OPERATION_SINDOOR pic.twitter.com/1CcL1kpm27
— Bundelkhnad (@maibundelkhand) May 6, 2025
ಭಾರತ ನಡೆಸಿದ ಈ ದಾಳಿಯಲ್ಲಿ ಲಷ್ಕರ್ ಉಗ್ರ ಹಫೀಜ್ ಸಯಿದ್‌ಗೆ (Hafiz Saeed) ಸಂಬಂಧಿಸಿದ ಮರ್ಕಜ್ ಸುಭಾನಲ್ಲಾಹ್ ಮಸೀದಿ ಧ್ವಂಸವಾಗಿದೆ. ಸುಮಾರು 15 ಎಕ್ರೆ ವಿಸ್ತೀರ್ಣ ಪ್ರದೇಶದಲ್ಲಿ ನಿರ್ಮಾಣವಾಗಿದ್ದ ಈ ಮಸೀದಿ ಆವರಣದಲ್ಲಿ ಉಗ್ರ ಚಟುವಟಿಕೆಗಳು ನಡೆಯುತ್ತಿತ್ತು ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಮಂಗಳವಾರ (ಮೇ 6) ಗಡಿಯಲ್ಲಿ ಸಮಾರಾಭ್ಯಾಸ ನಡೆಸುತ್ತಿದ್ದ ಭಾರತೀಯ ಸೇನೆ ತಡರಾತ್ರಿ 1:44ರ ವೇಳೆ ರಫೇಲ್, ಮಿರಾಜ್-2000 ಮತ್ತು ಸುಖೋಯ್-30 ಸೇರಿದಂತೆ ಇತರ ಯುದ್ಧ ವಿಮಾನಗಳನ್ನ ಬಳಸಿ ಪಾಕ್ ಉಗ್ರತಾಣಗಳ ಮೇಲೆ ದಾಳಿ ಮಾಡಿದೆ.
ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಭಾರತ ತಡರಾತ್ರಿ 1:44ಕ್ಕೆ ದಾಳಿ ನಡೆಸಿದೆ. ರಫೇಲ್ ಯುದ್ಧ ವಿಮಾನಗಳನ್ನು ಬಳಸಿ ಪಾಕಿಸ್ತಾನ (Pakistan) ಮತ್ತು ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ (PoK) ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಏರ್ ಸ್ಟ್ರೈಕ್ (Air Strike) ನಡೆಸಿದೆ. ಈ ದಾಳಿಗಳಲ್ಲಿ 70ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿರುವುದಾಗಿ ಕೆಲ ವರದಿಗಳು ತಿಳಿಸಿವೆ.
#OperationSindoor | More information on the terrorist hotbed targeted by the Indian armed forces-
1. Markaz Subhan Allah, Jaish-e-Mohammad Bahawalpur, Punjab, Pakistan- This Markaz serves as the operational headquarter of JeM and associated with terrorist plannings including… pic.twitter.com/EMpWU2txKT
— ANI (@ANI) May 7, 2025
ಉಗ್ರರ 9 ಸ್ಥಳಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದೇವೆ. ಯಾವುದೇ ಯಾವುದೇ ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ. ಗುರಿ ಮಾಡಲಾದ 9 ಸ್ಥಳಗಳಲ್ಲಿ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಸೇರಿವೆ ಎಂದು ಮೂಲಗಳು ತಿಳಿಸಿವೆ.