ಟೋಕಿಯೊ: ಹೊಸ ವರ್ಷದ ಆರಂಭದಲ್ಲೇ ಜಪಾನ್‍ಗೆ (Japan) ತೀವ್ರ ಆಘಾತ ಎದುರಾಗಿದೆ. ಈಶಾನ್ಯ ಜಪಾನ್‍ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಇಶಿಕಾವಾ ಪ್ರಾಂತ್ಯದ ವಾಜಿಮಾ ನಗರಕ್ಕೆ 1.2 ಮೀಟರ್‌ಗಳಷ್ಟು ಎತ್ತರದ ತೆರೆಗಳು ಅಪ್ಪಳಿಸುತ್ತಿದೆ.
ಇಶಿಕಾವಾ, ನೈಕತಾ ಮತ್ತು ಟೊಯಾಮಾ ನಗರಗಳ ಕರಾವಳಿ ತೀರಗಳಲ್ಲಿ ಸುನಾಮಿ (Tsunami) ಎಚ್ಚರಿಕೆ ನೀಡಲಾಗಿದೆ. ಇಶಿಕಾವಾ ಜಿಲ್ಲೆಯ ಕರಾವಳಿ ನೋಟೋಗೆ 5 ಮೀಟರ್ ಎತ್ತರದವರೆಗಿನ ಬೃಹತ್ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ. ನೈಗತ ಮತ್ತು ಟೊಯಾಮಾ ಸೇರಿದಂತೆ ಉಳಿದ ಕೆಲವು ಕರಾವಳಿ ತೀರಗಳಲ್ಲಿ 3 ಮೀಟರ್‍ವರೆಗೂ ಅಲೆಗಳು ಏಳಬಹುದು ಎಂದು ಜಪಾನ್ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಶ್ರೀರಾಮನ ಭಕ್ತರಿಗೆ ಮಾತ್ರ ಅಯೋಧ್ಯೆಗೆ ಆಹ್ವಾನ: ಉದ್ಧವ್ ಠಾಕ್ರೆಗೆ ಆಚಾರ್ಯ ಸತ್ಯೇಂದ್ರ ದಾಸ್ ತಿರುಗೇಟು
Advertisement
ಸ್ಥಳೀಯ ಕಾಲಮಾನ ಸಂಜೆ 4:10 ಸುಮಾರಿಗೆ ಇಶಿಕಾವಾ ಪ್ರಾಂತ್ಯದ ನೋಟೊ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.4ರಿಂದ 7.6 ರವರೆಗೂ ಭೂಕಂಪನದ ತೀವ್ರತೆ ದಾಖಲಾಗಿದೆ. ಜಪಾನ್‍ನ ಈಶಾನ್ಯ ಭಾಗದ ನನಾವೋ ಭೂ ಕಂಪನದ ಕೇಂದ್ರ ಬಿಂದು ಎಂದು ವರದಿಯಾಗಿದೆ.
Advertisement
Advertisement
ಹವಾಮಾನ ಇಲಾಖೆ, ಜನರಿಗೆ ಆದಷ್ಟು ಮನೆಗಳಿಂದ ದೂರದ ಬಯಲು ಪ್ರದೇಶಗಳಲ್ಲಿ ಇರುವಂತೆ ಸೂಚಿಸಿದೆ. ಅಲ್ಲದೇ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ.
Advertisement
ಮಾ.2011 ರಲ್ಲಿ ಈಶಾನ್ಯ ಜಪಾನ್‍ನಲ್ಲಿ ಸಂಭವಿಸಿದ 9.0-ತೀವ್ರತೆಯ ಭೂಕಂಪದ 18,500 ಜನ ಸಾವಿಗೀಡಾಗಿದ್ದರು. ಇದನ್ನೂ ಓದಿ: ಇಸ್ರೋ 2024ರ ಮೊದಲ ಎಕ್ಸ್‌ಪೋಸ್ಯಾಟ್ ಉಪಗ್ರಹ ಉಡಾವಣೆ ಯಶಸ್ವಿ
ಸುನಾಮಿ ಹೇಗೆ ಸಂಭವಿಸುತ್ತದೆ?
ಸಮುದ್ರದ ಆಳದಲ್ಲಿ ಭೂಕಂಪ ಅಥವಾ ಜ್ವಾಲಾಮುಖಿಗಳು ಸಂಭವಿಸಿದಾಗ, ಸಮುದ್ರದ ಅಡಿಯಲ್ಲಿರುವ ಭೂಪದರ ಸ್ಥಳಾಂತರಗೊಳ್ಳುತ್ತದೆ. ಇದು ಸಮುದ್ರದ ನೀರನ್ನು ಮೇಲಕ್ಕೆ ತಳ್ಳುತ್ತದೆ. ಇದರಿಂದ ಅಪಾರ ಪ್ರಮಾಣದ ಅಲೆಗಳು ಹುಟ್ಟಿಕೊಳ್ಳುತ್ತವೆ. ಈ ಅಲೆಗಳ ಎತ್ತರ ಹಾಗೂ ತೀವ್ರತೆ ಭೂಕಂಪದ ತೀವ್ರತೆಯನ್ನು ಆಧರಿಸಿರುತ್ತದೆ. ಭಾರೀ ಪ್ರಮಾಣದ ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸಿ ಅಪಾರ ಪ್ರಮಾಣದ ಹಾನಿಯನ್ನು ಉಂಟುಮಾಡುತ್ತವೆ.