ಭೋಪಾಲ್: ಸಮಾಜದಲ್ಲಿ ತೃತೀಯಲಿಂಗಿಗಳಿಗೆ ಕಾನೂನು ಬದ್ಧ ಹಕ್ಕುಗಳನ್ನು ನೀಡಲಾಗಿದೆ. ಆದರೆ ಇನ್ನೂ ಅವರು ಏನನ್ನಾದರೂ ಸಾಧಿಸಲು ಸ್ಥಳ ಪಡೆಯಲು ಸಾಧ್ಯವಾಗಿಲ್ಲ ಎಂದು ಮೊದಲ ತೃತೀಯ ಲಿಂಗಿ ಸಮುದಾಯದ ನ್ಯಾಯಾಧೀಶರಾದ (Transgender Judge) ಜೋಯಿತಾ ಮೊಂಡಲ್ (Joyita Mondal) ತಿಳಿಸಿದರು.
ಇಂದೋರ್‌ಗೆ ಭೇಟಿ ನೀಡಿದ ಅವರು, ತೃತೀಯ ಲಿಂಗಿಗಳು ಸಮಾನತೆಯನ್ನು ಪಡೆಯಲು ಸರ್ಕಾರವು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಇದರಿಂದಾಗಿ ಸಮಾಜದ ಇತರ ಜನರಿಗೂ ನಮ್ಮ ಬಗ್ಗೆ ಸೂಕ್ಷ್ಮತೆ ಬರುತ್ತದೆ ಎಂದ ಅವರು, ಸುಪ್ರೀಂಕೋರ್ಟ್ ತೃತೀಯ ಲಿಂಗಿಗಳಿಗೆ ಸಮಾನ ಹಕ್ಕು ಸಿಗುತ್ತದೆ ಎಂದು ಹೇಳಿದೆ. ಆದರೆ ಇದಕ್ಕಾಗಿ ಮಂಡಳಿ ರಚನೆಯಾಗಬೇಕು ಎಂದು ಒತ್ತಾಯಿಸಿದರು.
ಕಳೆದ 8 ವರ್ಷಗಳಲ್ಲಿ ತೃತೀಯಲಿಂಗಿಗಳಿಗಾಗಿ ಸರ್ಕಾರ ಏನನ್ನೂ ಮಾಡಿಲ್ಲ. ಆಸ್ಪತ್ರೆಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ನಮಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: 2024ರ ಅಂತ್ಯದ ವೇಳೆಗೆ ದೇಶದ ರಸ್ತೆ ಅಮೆರಿಕದ ರಸ್ತೆಗಳಂತೆ ಆಗುತ್ತವೆ: ಗಡ್ಕರಿ
ತೃತೀಯಲಿಂಗಿ ಮತ್ತು ಅವರ ವಾರಸುದಾರನ ವಿವಾಹದ ಕುರಿತು ಪ್ರತಿಕ್ರಿಯಿಸಿದ ಅವರು, ವಯಸ್ಸಾದಂತೆ, ತೃತೀಯಲಿಂಗಿಗಳ ಬೆಂಬಲಕ್ಕಾಗಿ ಯಾರಾದರೂ ಇರುವುದು ಅವಶ್ಯಕ. ಇದಕ್ಕಾಗಿ ಅವರ ಉತ್ತರಾಧಿಕಾರಿಗಾಗಿ ಮಕ್ಕಳನ್ನು ದತ್ತು ಪಡೆಯುವುದು ಅವಶ್ಯಕ. ಆದ್ದರಿಂದ ಮನಸ್ಸು ಒತ್ತಡದಲ್ಲಿದ್ದಾಗ ಮಗು ನಿಮ್ಮೊಂದಿಗಿದ್ದರೆ, ಎಲ್ಲಾ ಒತ್ತಡವು ಕಡಿಮೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಚೀನಾ ಯುದ್ಧ ತಯಾರಿ ನಡೆಸುತ್ತಿದೆ – ನಮ್ಮ ಕೇಂದ್ರ ಸರ್ಕಾರ ನಿದ್ರಿಸುತ್ತಿದೆ: ರಾಹುಲ್ ಗಾಂಧಿ