ಮುಂಬೈ: ಭಾರತದಲ್ಲಿ ಮೊದಲ ಟೆಸ್ಲಾ ಕಾರು (Tesla Car) ಮಾರಾಟವಾಗಿದೆ. ‘ಮಾಡೆಲ್ Y’ ಟೆಸ್ಲಾ ಕಾರನ್ನು ಸಚಿವರೊಬ್ಬರು ಖರೀದಿಸಿದ್ದಾರೆ.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ‘ಟೆಸ್ಲಾ ಎಕ್ಸ್‌ಪೀರಿಯೆನ್ಸ್ ಸೆಂಟರ್’ನಿಂದ ಕಾರು ಮಾರಾಟವಾಗಿದೆ. ಮೊದಲ ಟೆಸ್ಲಾ (ಮಾದರಿ Y) ಕಾರನ್ನು ರಾಜ್ಯದ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರಿಗೆ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಭಾರತಕ್ಕೆ ಟೆಸ್ಲಾ ಎಂಟ್ರಿ | ಮೈಲೇಜ್ ಎಷ್ಟು? ಬೇರೆ ದೇಶದಲ್ಲಿ ದರ ಎಷ್ಟಿದೆ? ಭಾರತದಲ್ಲಿ ದುಬಾರಿ ಯಾಕೆ?
#WATCH | Mumbai, Maharashtra: Delivery of the first Tesla (Model Y) car from ‘Tesla Experience Centre’ at Bandra Kurla Complex, Mumbai, being made to the State’s Transport Minister Pratap Sarnaik.
‘Tesla Experience Center’, the first in India, was inaugurated on July 15 this… pic.twitter.com/UyhUBCYygG
— ANI (@ANI) September 5, 2025
ಭಾರತದಲ್ಲಿ ಮೊದಲನೆಯದಾದ ‘ಟೆಸ್ಲಾ ಎಕ್ಸ್‌ಪೀರಿಯೆನ್ಸ್ ಸೆಂಟರ್’ ಅನ್ನು ಜುಲೈ 15 ರಂದು ಉದ್ಘಾಟಿಸಲಾಗಿತ್ತು. ‘ಭಾರತದ ಮೊದಲ ಟೆಸ್ಲಾ ಕಾರು ಮಾಡೆಲ್ ವೈ ಖರೀದಿಸಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಮಹಾರಾಷ್ಟ್ರ ಸಾರಿಗೆ ಸಚಿವ ಮತ್ತು ಭಾರತದ ಮೊದಲ ಟೆಸ್ಲಾ ಕಾರಿನ ಮಾಲೀಕ ಪ್ರತಾಪ್ ಸರ್ನಾಯಕ್ ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸಾರಿಗೆ ಸಚಿವನಾಗಿ, ನಾನು ಇದನ್ನು ಖರೀದಿಸಿದ್ದೇನೆ. ಮಹಾರಾಷ್ಟ್ರ ಸರ್ಕಾರ ಯಾವಾಗಲೂ ಪರಿಸರ ಸ್ನೇಹಿ ಕಾರುಗಳನ್ನು ರಸ್ತೆಗಳಿಗೆ ತರಲು ಪ್ರಯತ್ನಿಸುತ್ತದೆ. ಪರಿಸರ ಸ್ನೇಹಿ ವಾಹನಗಳನ್ನು ಸಾಧ್ಯವಾದಷ್ಟು ಬಳಸಲು ನಾನು ಈ ಸಾರ್ವಜನಿಕ ಜಾಗೃತಿ ಮೂಡಿಸುತ್ತೇನೆ. ಮುಂದಿನ 10 ವರ್ಷಗಳಲ್ಲಿ ರಸ್ತೆಗಳಲ್ಲಿ ಗರಿಷ್ಠ ಸಂಖ್ಯೆಯ ವಿದ್ಯುತ್ ವಾಹನಗಳನ್ನು ಹೊಂದಲು ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ವಿದ್ಯುತ್ ವಾಹನ ತಯಾರಿಕಾ ಕಂಪನಿಗಳಿಗೆ ಎಲ್ಲಾ ಅನುಕೂಲಗಳನ್ನು ಒದಗಿಸಲು ಸಾರಿಗೆ ಇಲಾಖೆ ಪ್ರಯತ್ನಿಸುತ್ತಿದೆ. ಅಂತಹ ವಾಹನಗಳ ಮಾಲೀಕರಿಗೂ ನಾವು ಸೌಲಭ್ಯಗಳನ್ನು ಒದಗಿಸಿದ್ದೇವೆ ಎಂದಿದ್ದಾರೆ.
ನಾನು ನನ್ನ ಮೊಮ್ಮಗನಿಗಾಗಿ ಈ ಕಾರನ್ನು ಖರೀದಿಸಿದ್ದೇನೆ. ಇದರಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡುತ್ತದೆ. ಕಾರನ್ನು ಖರೀದಿಸಲು ಶಕ್ತರಾಗಿರುವ ಪೋಷಕರು ತಮ್ಮ ಮಕ್ಕಳನ್ನು ಈ ಕಾರುಗಳಲ್ಲಿ ಶಾಲೆಗಳಿಗೆ ಬಿಟ್ಟರೆ ಪರಿಸರ ಸ್ನೇಹಿ ಕಾರುಗಳ ಬಗ್ಗೆ ಸಾರ್ವಜನಿಕ ಜಾಗೃತಿ ಇರುತ್ತದೆ. ಮಕ್ಕಳು ಇದರ ಬಗ್ಗೆ ಚರ್ಚಿಸುತ್ತಾರೆ. ಜನರು ಹೆಚ್ಚು ಹೆಚ್ಚು ಪರಿಸರ ಸ್ನೇಹಿ ಕಾರುಗಳನ್ನು ಖರೀದಿಸುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಟೆಸ್ಲಾ: 5 ಮಾಡೆಲ್ Y ವಾಹನಗಳು ಈಗಾಗಲೇ ಮುಂಬೈಗೆ ಎಂಟ್ರಿ