ಮುಂಬೈ: ಶ್ರೀಲಂಕಾ (Sri Lanka) ವಿರುದ್ಧ ನಡೆದ ಮೊದಲ ಟಿ20 (T20I) ಪಂದ್ಯದಲ್ಲಿ ವೈಡ್ ಕೊಡದ ಅಂಪೈರ್ (Umpire) ವಿರುದ್ಧ ಟೀಂ ಇಂಡಿಯಾ ಬ್ಯಾಟ್ಸ್‌ಮ್ಯಾನ್ ದೀಪಕ್ ಹೂಡಾ (Deepak Hooda) ಗರಂ ಆದ ಘಟನೆ ಪಂದ್ಯದ ನಡುವೆ ನಡೆದಿದೆ.
Advertisement
ಸ್ಲಾಗ್ ಓವರ್‌ಗಳಲ್ಲಿ ದೀಪಕ್ ಹೂಡಾ ಅಬ್ಬರದ ಬ್ಯಾಟಿಂಗ್‍ಗೆ ಮುಂದಾಗಿದ್ದರು. 18 ಓವರ್ ಎಸೆಯಲು ಬಂದ ಕಸುನ್ ರಂಜಿತ್ ತಮ್ಮ 5ನೇ ಎಸೆತ ಆಫ್‌ಸೈಡ್ ಎಸೆದರು. ಈ ವೇಳೆ ಒಂದು ಹೆಜ್ಜೆ ಆಫ್‌ಸೈಡ್ ಮುಂದೆ ಕಾಲಿಟ್ಟಿದ್ದ ಹೂಡಾ ಹೊಡೆಯಲು ಪ್ರಯತ್ನಿಸಿ ವೈಡ್ ಎಂದು ತಿಳಿದು ಬಾಲ್ ಬಿಟ್ಟಿದ್ದಾರೆ. ಆದರೆ ಅಂಪೈರ್ ವೈಡ್ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಹೂಡಾ ಅಂಪೈರ್‌ಗೆ ನಿಂದಿಸಿದ್ದಾರೆ. ಇದನ್ನೂ ಓದಿ: ಅಕ್ಷರ್, ಹೂಡಾ ಹೊಡಿಬಡಿ ಆಟ – ಲಂಕಾಗೆ ಲಗಾಮು ಹಾಕಿದ ಮಾವಿ
Advertisement
Advertisement
ಅನ್‍ಫೀಲ್ಡ್ ಅಂಪೈರ್ ಕೆ.ಎನ್ ಅನಂತ ಪದ್ಮನಾಭನ್ ವಿರುದ್ಧ ವೈಡ್‍ಗಾಗಿ ವಾದಿಸಿದ ಹೂಡಾ. ಓವರ್ ಮುಕ್ತಾಯದ ಬಳಿಕ ಈ ಬಗ್ಗೆ ಪ್ರಶ್ನಿಸಿದ್ದಾರೆ. ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ.
Advertisement
Did he Deepak Hooda just said Behan ka l***da to an umpire@BCCI @ICC @ICCMediaComms @hardikpandya7 pic.twitter.com/leBS237V0L
— Mudasir Bashir (@Mudasirhamal) January 3, 2023
ಸ್ಲಾಗ್ ಓವರ್‌ಗಳಲ್ಲಿ ಅಬ್ಬರಿಸಿದ ಹೂಡಾ, ಅಕ್ಷರ್
94 ರನ್‍ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಕುಸಿತಕಂಡಿದ್ದ ತಂಡಕ್ಕೆ ಆ ಬಳಿಕ ಸ್ಲಾಗ್ ಓವರ್‌ಗಳಲ್ಲಿ ಶಕ್ತಿ ತುಂಬಿದ್ದು, ದೀಪಕ್ ಹೂಡಾ ಮತ್ತು ಅಕ್ಷರ್ ಪಟೇಲ್. ಇವರಿಬ್ಬರೂ ಕುಸಿತದ ಭೀತಿಯಲ್ಲಿದ್ದ ತಂಡಕ್ಕೆ ಭರ್ಜರಿ ಬ್ಯಾಟಿಂಗ್ ಮೂಲಕ ಚೇತರಿಕೆ ನೀಡಿದರು. ಹೂಡಾ ತನ್ನ ಹೊಡಿಬಡಿ ಬ್ಯಾಟಿಂಗ್ ಮೂಲಕ 41 ರನ್ (23 ಎಸೆತ, 1 ಬೌಂಡರಿ, 4 ಸಿಕ್ಸ್) ಚಚ್ಚಿ ಮಿಂಚಿದರು. ಅಕ್ಷರ್ ಪಟೇಲ್ 31 ರನ್ (20 ಎಸೆತ, 3 ಬೌಂಡರಿ, 1 ಸಿಕ್ಸ್) ಬಾರಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಇದನ್ನೂ ಓದಿ: ಮಂಕಡ್ ಮೂಲಕ ರನೌಟ್ ಮಾಡಿದ ಜಂಪಾ – ನಾಟೌಟ್ ಎಂದ ಅಂಪೈರ್!
ಈ ಜೋಡಿ 6ನೇ ವಿಕೆಟ್‍ಗೆ ಅಜೇಯ 68 ರನ್ (35 ಎಸೆತ) ಚಚ್ಚಿದ ಪರಿಣಾಮ 20 ಓವರ್‌ಗಳಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 162 ರನ್ ಬಾರಿಸಿತು. ಬ್ಯಾಟಿಂಗ್‍ನಲ್ಲಿ ಅಕ್ಷರ್ ಪಟೇಲ್ ಮತ್ತು ದೀಪಕ್ ಹೂಡಾ ಧೂಳೆಬ್ಬಿಸಿದರೆ, ಬೌಲಿಂಗ್‍ನಲ್ಲಿ ಶಿವಂ ಮಾವಿ ಶೈನ್ ಆದರು. ಪರಿಣಾಮ 20 ಓವರ್‌ಗಳಲ್ಲಿ 163 ರನ್ ಗುರಿ ಬೆನ್ನಟ್ಟಿದ ಶ್ರೀಲಂಕಾ 160 ರನ್‍ಗಳಿಗೆ ಸರ್ವಪತನ ಕಂಡು ಸೋಲುಂಡಿತು. ಇತ್ತ 2 ರನ್‍ಗಳ ರೋಚಕ ಜಯ ಸಾಧಿಸಿದ ಭಾರತ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.