ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ವರ್ಷದ ಮೊದಲ ಮಳೆ ಸುರಿದಿದೆ. ಯುಗಾದಿ ಹಬ್ಬವಾಗಿ ಮೂರು ದಿನಗಳ ನಂತರ ಮೋಡ ಮುಸುಕಿದ ವಾತಾವರಣವಿದ್ದ ಚಿತ್ರದುರ್ಗ ನಗರದಲ್ಲಿ ಉತ್ತಮ ಮಳೆಯಾಗಿದೆ.
ನಗರದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶುರುವಾದ ಮಳೆ (Rain) ಮೂರು ಗಂಟೆವರೆಗೂ ಹದವಾಗಿ ಸುರಿಯಿತು. ಮಳೆಯ ನಿರೀಕ್ಷೆ ಇಲ್ಲದೆ ರಸ್ತೆಯಲ್ಲಿ ಕಾರ್ಯನಿಮಿತ್ತ ಓಡಾಡುತ್ತಿದ್ದವರು ಮಳೆ ಆರಂಭವಾಗುತ್ತಿದ್ದಂತೆ ಪರದಾಡಿದರು. ವಾಹನ ಸವಾರರು ಕೂಡಾ ಆಕಸ್ಮಿಕ ಮಳೆಗೆ ಸಿಲುಕಿದರು. ಇದನ್ನೂ ಓದಿ: ನೀರಾವರಿ ಯೋಜನೆಗಳಿಗೆ ಅನುಮತಿ ನೀಡಲು ಸಿಎಂ ಮನವಿ
ಬುಧವಾರ ಕೂಡ ಮಳೆ ಮೋಡ ಕವಿದ ವಾತಾವರಣವಿತ್ತು. ರಾತ್ರಿ ಒಂದೆರಡು ನಿಮಿಷ ಕೆಲವೆಡೆ ಮಳೆ ಸುರಿದಿತ್ತು. ಆದರೆ, ಇಂದು ಸುರಿದ ಮಳೆಯಿಂದ ಬೇಸಿಗೆ ಬಿಸಿಲಿಗೆ ಕಾದು ಕಾವಲಿಯಾಗಿದ್ದ ಭೂಮಿ ತಂಪಾಗಿದೆ. ಮರ, ಗಿಡಗಳು ತೊಳೆದು ನಿಲ್ಲಿಸದಂತೆ ಭಾಸವಾದವು. ಇದನ್ನೂ ಓದಿ: ರಾಹುಲ್ ಜೊತೆ ಸಿದ್ದರಾಮಯ್ಯ ಪ್ರತ್ಯೇಕ ಮಂಥನ – ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ತೀರ್ಮಾನ
ಇನ್ನು ಬೇಸಿಗೆ ಆರಂಭದಲ್ಲೇ ತಾಪಮಾನದ ಹೊಡೆತಕ್ಕೆ ಸುಸ್ತಾಗಿದ್ದ ಜನರಿಗೆ ಇಂದು ಸುರಿದ ಮಳೆ ಸಂತಸ ತಂದಿದೆ. ಮಳೆಯಿಂದ ವಾತಾವರಣ ತಂಪಾಗಿದ್ದು, ಜನರಲ್ಲಿ ಮಂದಹಾಸ ಮೂಡಿಸಿದೆ. ಇದನ್ನೂ ಓದಿ: 25 ಸಾವಿರ ಶಿಕ್ಷಕರನ್ನು ವಜಾಗೊಳಿಸಿದ ಸುಪ್ರೀಂ – ದೀದಿ ಸರ್ಕಾರಕ್ಕೆ ಮುಖಭಂಗ