ರಾಂಚಿ: ಜಾರ್ಖಂಡ್ ವಿಧಾನಸಭೆಗೆ (Jharkhand Assembly Elections) ನಾಳೆ ಮೊದಲ ಹಂತದ ಮತದಾನ ನಡೆಯಲಿದೆ. ಮೊದಲ ಸುತ್ತಿನಲ್ಲಿ 15 ಜಿಲ್ಲೆಗಳ 43 ಸ್ಥಾನಗಳಿಗೆ ಮತದಾನ (Voting) ನಡೆಯಲಿದೆ.
ಮೊದಲ ಹಂತದಲ್ಲಿ 683 ಅಭ್ಯರ್ಥಿಗಳು ಅಖಾಡದಲ್ಲಿದ್ದು, ನಾಳೆ (ಬುಧವಾರ) ಅವರ ಭವಿಷ್ಯ ಇವಿಎಂಗಳಲ್ಲಿ (EVM) ಭದ್ರವಾಗಲಿದೆ. ಮೊದಲ ಸುತ್ತಿನಲ್ಲಿ ಗರಿಷ್ಠ ಆರು ಸ್ಥಾನಗಳು ಪೂರ್ವ ಸಿಂಗ್‌ಭೂಮ್ ಜಿಲ್ಲೆಯಲ್ಲಿವೆ. ಪಲಮು, ಪಶ್ಚಿಮ ಸಿಂಗ್‌ಭೂಮ್ ಮತ್ತು ರಾಂಚಿ ಜಿಲ್ಲೆಗಳಲ್ಲಿ ತಲಾ ಐದು ವಿಧಾನಸಭಾ ಸ್ಥಾನಗಳಿದ್ದು, ಕೊಡೆರ್ಮಾ ಮತ್ತು ರಾಮಗಢ ಜಿಲ್ಲೆಯಲ್ಲಿ ತಲಾ ಒಂದು ಸ್ಥಾನವಿದೆ. ಇಂಡಿಯಾ ಒಕ್ಕೂಟದ ಭಾಗವಾಗಿರುವ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ, ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್, ಜನತಾ ದಳ ಯುನೈಡೆಟ್ ಒಳಗೊಂಡು ಎನ್‌ಡಿಎ ಒಕ್ಕೂಟದ ವಿರುದ್ಧ ಸ್ಪರ್ಧೆ ಮಾಡಿದೆ. ಇದನ್ನೂ ಓದಿ: ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧ ವಾಪಸ್? – ಹೈಕಮಾಂಡ್ ಲಾಬಿಗೆ ಮಣಿದ್ರಾ ಡಿಕೆಶಿ?
Advertisement
Advertisement
ಮೊದಲ ಹಂತದಲ್ಲಿ ಒಟ್ಟು 43 ಸ್ಥಾನಗಳ ಪೈಕಿ ಜೆಎಂಎಂ 23 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 17 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಒಟ್ಟು ಐದು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎನ್‌ಡಿಎಯಲ್ಲಿ ಬಿಜೆಪಿ 43ರಲ್ಲಿ 36 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸುದೇಶ್ ಮಹತೋ ಅವರ ಎಜೆಎಸ್‌ಯು ನಾಲ್ಕು ಸ್ಥಾನಗಳಲ್ಲಿ, ನಿತೀಶ್ ಕುಮಾರ್ ಅವರ ಜೆಡಿಯು ಎರಡು ಸ್ಥಾನಗಳಲ್ಲಿ ಮತ್ತು ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ (ಆರ್) ಒಂದು ಸ್ಥಾನದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದಲ್ಲದೇ ಇತರೆ ಸಣ್ಣ ಪಕ್ಷಗಳೂ ಸ್ಪರ್ಧೆಯನ್ನು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4 ಮೀಸಲಾತಿ ಕೊಡಿ: ಸರ್ಕಾರಕ್ಕೆ ಮುಸ್ಲಿಂ ಸಮುದಾಯ ಬೇಡಿಕೆ
Advertisement
ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್, ಆರೋಗ್ಯ ಸಚಿವ ಬನ್ನಾ ಗುಪ್ತಾ, ರಾಜ್ಯಸಭಾ ಸಂಸದ ಮಹುವಾ ಮಜಿ, ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಪತ್ನಿ ಗೀತಾ ಕೋಡಾ ಮತ್ತು ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಅವರ ಸೊಸೆ ಪೂರ್ಣಿಮಾ ದಾಸ್ ಅವರಂತಹ ಪ್ರಮುಖ ಮುಖಗಳು ಮೊದಲ ಹಂತದ ಚುನಾವಣಾ ಅಖಾಡದಲ್ಲಿ ಗಮನ ಸೆಳೆದಿವೆ. ಇದನ್ನೂ ಓದಿ: Assam| ನಿರ್ಮಾಣ ಹಂತದ ಮೋರಿಗೆ ಬಿದ್ದ ಕಾರು – ನಾಲ್ವರು ಸಾವು, ಇಬ್ಬರು ಗಂಭೀರ
Advertisement
ಚುನಾವಣೆಗಾಗಿ ಚುನಾವಣಾ ಆಯೋಗವು ಸಕಲ ತಯಾರಿ ಮಾಡಿಕೊಂಡಿದೆ. ರಾಜ್ಯಾದ್ಯಂತ ಒಟ್ಟು 15,344 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 225 ಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಿಸಿದೆ. ಭದ್ರತಾ ಸುವ್ಯವಸ್ಥೆ ಕಾಪಾಡಲು ಮತ್ತು ಚುನಾವಣಾ ಪ್ರಕ್ರಿಯೆಯನ್ನು ಸುಗಮಗೊಳಿಸಲು 200 ಕಂಪನಿಗಳ ಭದ್ರತಾ ಪಡೆಗಳನ್ನು ನಿಯೋಜಿಸಿದೆ. ಮೊದಲ ಹಂತದಲ್ಲಿ 1.37 ಕೋಟಿ ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ. ಇದನ್ನೂ ಓದಿ: ತಲೆ ಮೇಲೆ ಹರಿದ ಸರ್ಕಾರಿ ಬಸ್- ವಿದ್ಯಾರ್ಥಿ ಸ್ಥಳದಲ್ಲೇ ಸಾವು