ಮುಂಬೈ: ಟಾಟಾ ಐಪಿಎಲ್-2022 ಟೂರ್ನಿಯ ೪ನೇ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಸೇರ್ಪಡೆಗೊಂಡಿರುವ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸೆಣಸಲಿವೆ.
Advertisement
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದ್ದು, ಚೊಚ್ಚಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಶುಭಾರಂಭ ಮಾಡುವ ತವಕದಲ್ಲಿ ಎರಡೂ ತಂಡಗಳಿವೆ. ಇದನ್ನೂ ಓದಿ: ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಪಿ.ವಿ ಸಿಂಧು
Advertisement
ಉಭಯ ತಂಡಗಳಲ್ಲೂ ಬಲಿಷ್ಠ ಆಟಗಾರರಿದ್ದು, ಹಾರ್ದಿಕ್ ಪಾಂಡ್ಯ ಗುಜರಾತ್ ತಂಡವನ್ನು ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ನ್ನು ಮುನ್ನಡೆಸಲಿದ್ದಾರೆ. ಈ ಋತುವಿನ ಟಿ-20 ಸಮರದಲ್ಲಿ ಹೊಸ ತಂಡಗಳಲ್ಲಿ ಕ್ರಿಕೆಟ್ ಪ್ರೇಮಿಗಳ ಚಿತ್ತ ನೆಟ್ಟಿದೆ. ಐಪಿಎಲ್-೨೦೨೨ರಲ್ಲಿ ಈ ಎರಡೂ ತಂಡಗಳೂ ಯಾವ ರೀತಿ ಎದುರಾಳಿಗಳಿಗೆ ಪೈಪೋಟಿ ನೀಡುತ್ತವೆ ಎಂಬ ಕುತೂಹಲವೂ ಇದೆ.
Advertisement
Advertisement
ಗುಜರಾತ್ ಟೈಟನ್ಸ್ ನಲ್ಲಿ ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಮಾಡ್ಯೂ ವಾಡೆ( ವಿಕೆಟ್ ಕೀಪರ್), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತಿವಾಟಿಯಾ, ವರುಣ್ ಅರೋನ್, ರಷೀದ್ ಖಾನ್, ಮೊಹಮ್ಮದ್ ಶಮಿ, ಲಾಕೀ ಫರ್ಗುಸನ್ ಕಣದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ನಲ್ಲಿ ಕೆ.ಎಲ್.ರಾಹುಲ್ (ನಾಯಕ), ಮನನ್ ವೋರಾ, ಎವಿನ್ ಲೆವಿಸ್, ಮನೀಷ್ ಪಾಂಡೆ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಕೃಷ್ಣಪ್ಪ ಗೌತಮ್, ಡಸ್ಲಾಂಟಾ ಚಮೀರಾ, ಅಂಕಿತ್ ರಜಪೂತ್, ಅವೇಶ್ ಖಾನ್, ರವಿ ಬಿಷ್ಣೋಯ್ ಇರಲಿದ್ದಾರೆ. ಇದನ್ನೂ ಓದಿ: ಬಿಗ್ ಹಿಟ್ಟರ್‌ಗಳ ಪಂಚ್ ಹಿಟ್ – ಆರ್‌ಸಿಬಿ ವಿರುದ್ಧ ಪಂಜಾಬ್‍ಗೆ ರೋಚಕ ಗೆಲುವು
ಕನ್ನಡಿಗ ಕೆ.ಎಲ್.ರಾಹುಲ್ ಈವರೆಗೆ 94 ಪಂದ್ಯಗಳಲ್ಲಿ 3,273 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 92 ಪಂದ್ಯಗಳಲ್ಲಿ 1,476 ರನ್ ಗಳಿಸಿದ್ದಾರೆ. ಆಪ್ತಮಿತ್ರರಾಗಿರುವ ಕೆ.ಎಲ್.ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಸೆಣಸಲಿದ್ದು, ಗೆಲುವು ಯಾರಿಗೆ ಎಂಬ ಕುತೂಹಲ ನೀಡಿದೆ. ರಾಹುಲ್ ಈಗಾಗಲೇ ಹಲವು ಬಾರಿ ಕಿಂಗ್ಸ್ ಪಂಜಾಬ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ನಲ್ಲಿ ಮಧ್ಯಂತರ ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯುತ್ತಿದ್ದ ಹಾರ್ದಿಕ್ ಪಾಂಡ್ಯ ನೂತನ ತಂಡದ ಸೇರ್ಪಡೆಯಿಂದ ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ತಂಡದ ನಾಯಕನಾಗಿದ್ದು ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದು ಸದ್ಯದ ಕುತೂಹಲವಾಗಿದೆ.