ನವದೆಹಲಿ: 18ನೇ ಲೋಕಸಭೆಯ (18th Lok Sabaha) ಮೊದಲ ಅಧಿವೇಶನ (Session) ಜೂನ್ 24 ರಂದು ಆರಂಭವಾಗಿ ಜುಲೈ 3 ರಂದು ಮುಕ್ತಾಯಗೊಳ್ಳಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju) ಬುಧವಾರ ತಿಳಿಸಿದ್ದಾರೆ.
9 ದಿನಗಳ ವಿಶೇಷ ಅಧಿವೇಶನದಲ್ಲಿ ಲೋಕಸಭೆಯ ಸ್ಪೀಕರ್ (Speaker) ಅವರನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಹೊಸ ಸಂಸದರು (MP) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯಸಭಾ ಅಧಿವೇಶನ ಜೂನ್ 26 ರಂದು ಆರಂಭವಾಗಿ ಜುಲೈ 3 ರಂದು ಕೊನೆಯಾಗಲಿದೆ. ಇದನ್ನೂ ಓದಿ: ವಾರಣಾಸಿಯಿಂದ ಪ್ರಿಯಾಂಕಾ ಸ್ಪರ್ಧಿಸುತ್ತಿದ್ರೆ ಮೋದಿ 2-3 ಲಕ್ಷ ಮತಗಳಿಂದ ಸೋಲ್ತಿದ್ರು: ರಾಹುಲ್ ಗಾಂಧಿ
Advertisement
First Session of 18th Lok Sabha is being summoned from 24.6.24 to 3.7.24 for oath/affirmation of newly elected Members, Election of Speaker, President’s Address and discussion thereon. 264th Session of Rajya Sabha will commence on 27.6.24 and conclude on 3.7.24. https://t.co/8OCbfg4CT1
— Kiren Rijiju (@KirenRijiju) June 12, 2024
Advertisement
ಅಧಿವೇಶನದ ಮೊದಲ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.