ಇಸ್ಲಾಮಾಬಾದ್: ಭಾರತದ ಸೇರಿದಂತೆ ವಿಶ್ವದ ಬೇರೆ ಬೇರೆ ದೇಶದಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಸದ್ಯ ಪಾಕಿಸ್ತಾನದಲ್ಲಿ ಬಿಡುಗಡೆಯಾಗಿ ಹವಾ ಸೃಷ್ಟಿಸಿದೆ.
ಸ್ಯಾಂಡಲ್‍ವುಡ್ ಸಿನಿಮಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಪಾಕಿಸ್ತಾನದಲ್ಲಿ ಬಿಡುಗಡೆಯಾಗಿದೆ. ಈ ಮೂಲಕ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ. ಪಾಕಿಸ್ತಾನದಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಇಸ್ಲಾಮಾಬಾದ್ ಕ್ಲಬ್ ಟಿಕೆಟ್ ಬುಕ್ಕಿಂಗ್ ಸೈಟ್ ನಲ್ಲಿ ಇಂದಿನಿಂದ ಟಿಕೆಟ್ ಬುಕ್ ಮಾಡಬಹುದಾಗಿದೆ. ಪಾಕಿಸ್ತಾನದ ಐಎಂಜಿಸಿ ಬ್ಯಾನರ್ ಆಡಿ, ಹಿಂದಿ ಆವತರಣಿಕೆಯಲ್ಲಿ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿದೆ.
ಈ ಹಿಂದೆ ಭಾರತದ ಆನೇಕ ಸಿನಿಮಾಗಳು ಪಾಕಿಸ್ತಾನದಲ್ಲಿ ಬಿಡುಗಡೆಯಾಗಿ ಕೋಟಿ ಕೋಟಿ ಹಣ ಗಳಿಸಿದ್ದವು. ಇದನ್ನು ಕಂಡ ಪಾಕ್ ಸರ್ಕಾರ ಕೆಲ ಸಿನಿಮಾಗಳಿಗೆ ನಿಷೇಧವನ್ನು ಹೇರಿತ್ತು. ನಟ ಶಾರುಖ್ ಖಾನ್ ಝೀರೋ ಬಿಡುಗಡೆಯಾಗಿದ್ದರೂ ಕೂಡ ಕೆಜಿಎಫ್ ಸಿನಿಮಾಗೆ ಪೈಪೋಟಿ ನೀಡಲು ವಿಫಲವಾಗಿತ್ತು.
ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಪಾಕಿಸ್ತಾನದಲ್ಲಿ ತೆರೆ ಕಂಡಿದೆ. ಅಂದಹಾಗೇ ಪಾಕಿಸ್ತಾನಿ ಮಂದಿಗೆ ಭಾರತೀಯ ಸಿನಿಮಾಗಳು ಹೊಸದೇನಲ್ಲ. ಬಾಲಿವುಡ್ ಚಿತ್ರರಂಗದ ಅನೇಕ ಸಿನಿಮಾಗಳು ಪಾಕಿಸ್ತಾನದಲ್ಲಿ ಬಿಡುಗಡೆ ಆಗಿದೆ. ಪ್ರಮುಖವಾಗಿ ಸಲ್ಮಾನ್‍ಖಾನ್, ಶಾರುಖ್ ಖಾನ್ ಸಿನಿಮಾಗಳನ್ನು ಪಾಕಿಸ್ತಾನಿಯರು ಹೆಚ್ಚು ಇಷ್ಟ ಪಡುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv