ನವದೆಹಲಿ: ದೆಹಲಿಯಲ್ಲಿ ಮೊದಲ ಬಾರಿಗೆ ಶ್ವಾನಗಳಿಗಾಗಿ ಉದ್ಯಾನವನ್ನು ರೂಪಿಸಲಾಗಿದೆ. ರಾಜೇಂದ್ರನಗರದಲ್ಲಿ ಶ್ವಾನಗಳಿಗಾಗಿ ಸಿದ್ಧಗೊಳಿಸಿರುವ ಪಾರ್ಕ್ ಅನ್ನು ದಕ್ಷಿಣ ದೆಹಲಿ ಮಹಾನಗರ ಪಾಲಿಕೆ ಉದ್ಘಾಟಿಸಿದೆ.
Advertisement
ಶ್ವಾನಗಳ ಚಟುವಟಿಕೆ ಹಾಗೂ ಆರೋಗ್ಯ ದೃಷ್ಟಿಯಿಂದ “ಡಾಗ್ ಪಾರ್ಕ್” ರೂಪಿಸಲಾಗಿದೆ. ಪಾರ್ಕ್ ಅನ್ನು ಸುಂದರ ಹಾಗೂ ಆಕರ್ಷಣೀಯವಾಗಿಡಲು ಚಿತ್ರಕಲೆಗಳನ್ನು ಬಿಡಿಸಲಾಗಿದೆ. ಇದನ್ನೂ ಓದಿ: ಅಪ್ಪು ಸಾವಿನ ಬೆನ್ನಲ್ಲೇ ಎಚ್ಚೆತ್ತ ಕೇರಳ ಸರ್ಕಾರ
Advertisement
ಪಾರ್ಕ್ ಅನ್ನು ಮಹಾನಗರ ಪಾಲಿಕೆಯ ಮೇಯರ್ ರಾಜಾ ಇಕ್ಬಲ್ ಸಿಂಗ್ ಅವರು ಶನಿವಾರ ಉದ್ಘಾಟಿಸಿದ್ದಾರೆ.
Advertisement
Advertisement
ಈ ವೇಳೆ ಮಾತನಾಡಿದ ಮೇಯರ್, ಜನರು ತಮ್ಮ ಶ್ವಾನಗಳನ್ನು ಪಾರ್ಕ್‍ಗೆ ಕರೆತಂದು ವಾಕ್ ಮಾಡಿಸಬಹುದು. ಉದ್ಯಾನವು ಸ್ವಿಂಗ್‍ಗಳು, ಹಸಿರು ಹುಲ್ಲು ಹಾಸನ್ನು ಒಳಗೊಂಡಿದೆ. ಸಾರ್ವಜನಿಕರು ತಮ್ಮ ಶ್ವಾನಗಳೊಂದಿಗೆ ಪಾರ್ಕ್‍ನಲ್ಲಿ ಅಡ್ಡಾಡಿ ಖುಷಿಪಡಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುನೀತ್ ಅವರಂತೆ ಅಜಾತಶತ್ರು ಮನೋಭಾವ, ಸರಳತೆ ಬೆಳೆಸಿಕೊಳ್ಳಲಿ- ಕಲಾವಿದರಿಗೆ ಡಿಕೆಶಿ ಕರೆ
ಕೋವಿಡ್-19 ಸಾಂಕ್ರಾಮಿಕದಿಂದ ಸಾಕು ನಾಯಿಗಳು ಹೊರಗಡೆ ಓಡಾಡಲಾಗದೇ ಮನೆಗಷ್ಟೇ ಸೀಮಿತವಾದವು. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನೂ ಎದುರಿಸುವಂತಾಯಿತು. ಸಾಕು ನಾಯಿಗಳು ದೈಹಿಕವಾಗಿ ಆರೋಗ್ಯವಾಗಿರಲು ಈ ಪಾರ್ಕ್ ಸಹಾಯ ಮಾಡುತ್ತದೆ. ಉದ್ಯಾನ ಅವುಗಳಿಗೆ ಸುರಕ್ಷಿತ ತಾಣವಾಗಿದೆ ಎಂದು ಹೇಳಿದ್ದಾರೆ.
ಸಾಕು ಪ್ರಾಣಿಗಳ ಪೋಷಕರ ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಲು ಪಾರ್ಕ್‍ನಲ್ಲಿ ನೋಂದಣಿ ಕೌಂಟರ್ ಅನ್ನು ಸ್ಥಾಪಿಸಲಾಗಿದೆ. ಅಷ್ಟೇ ಅಲ್ಲದೆ ಉದ್ಘಾಟನೆ ಸಂದರ್ಭದಲ್ಲಿ ಉಚಿತ ತಪಾಸಣೆ ಹಾಗೂ ರೇಬಿಸ್ ವಿರೋಧಿ ಲಸಿಕೆ ಶಿಬಿರವನ್ನು ಶ್ವಾನಗಳಿಗಾಗಿ ಆಯೋಜಿಸಲಾಗಿತ್ತು ಎಂದು ಕರೊಲ್ ಬಾಘ್ ವಲಯದ ಸಹಾಯಕ ಉಪ ಆಯುಕ್ತ ವಿಶಾಖ್ ಯಾದವ್ ತಿಳಿಸಿದ್ದಾರೆ.
ಬೆಂಗಳೂರು, ಹೈದರಾಬಾದ್‍ನಲ್ಲಿ ಈಗಾಗಲೇ ಶ್ವಾನ ಉದ್ಯಾನಗಳಿವೆ. ಅದೇ ದೃಷ್ಟಿಕೋನದೊಂದಿಗೆ ದಕ್ಷಿಣ ದೆಹಲಿ ನಗರಪಾಲಿಕೆ ಸಹ ಶ್ವಾನ ಉದ್ಯಾನ ರೂಪಿಸುವ ಯೋಜನೆ ಹೊಂದಿತ್ತು.