Smart Cities Mission: ಮುಂದಿನ ತಿಂಗಳಲ್ಲಿ ಮೊದಲ 22 ನಗರಗಳು ಸಿದ್ಧ

Public TV
2 Min Read
Smart Cities Mission
ಸಾಂದರ್ಭಿಕ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರದ (Government Of India) ಮಹಾತ್ವಾಕಾಂಕ್ಷೆ ಯೋಜನೆ ಸ್ಮಾರ್ಟ್ ಸಿಟಿ ಮಿಷನ್ (Smart Cities Mission) ಅಡಿಯಲ್ಲಿ ಮೊದಲ 22 ನಗರಗಳನ್ನು ಸ್ಮಾರ್ಟ್ ಆಗಿಸಲು ಸರ್ಕಾರ ಮುಂದಾಗಿದೆ.

ಆಗ್ರಾ, ವಾರಣಾಸಿ, ಚೆನ್ನೈ (Chennai), ಪುಣೆ ಮತ್ತು ಅಹಮದಾಬಾದ್ ಸೇರಿದಂತೆ 22 ನಗರಗಳಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಮುಂದಿನ ತಿಂಗಳೊಳಗೆ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲಿದ್ದು, ತಮ್ಮ ನಾಗರಿಕರಿಗೆ ಉತ್ತಮ ಗುಣಮಟ್ಟದ ಜೀವನ ಮತ್ತು ಸ್ವಚ್ಛ ಮತ್ತು ಸುಸ್ಥಿರ ಪರಿಸರವನ್ನು ಕಲ್ಪಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Smart Cities Mission 2

ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಆಯ್ಕೆಯಾದ ಉಳಿದ 78 ನಗರಗಳಲ್ಲಿ, ನಡೆಯುತ್ತಿರುವ ಯೋಜನೆಗಳನ್ನು ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಭೋಪಾಲ್, ಇಂದೋರ್, ಆಗ್ರಾ, ವಾರಣಾಸಿ, ಭುವನೇಶ್ವರ್, ಚೆನ್ನೈ, ಕೊಯಮತ್ತೂರು, ಈರೋಡ್, ರಾಂಚಿ, ಸೇಲಂ, ಸೂರತ್, ಉದಯಪುರ, ವಿಶಾಖಪಟ್ಟಣಂ, ಅಹಮದಾಬಾದ್, ಕಾಕಿನಾಡ, ಪುಣೆ, ವೆಲ್ಲೂರ್, ಪಿಂಪ್ರಿ-ಚಿಂಚ್‌ವಾಡ್, ಮಧುರೈ, ಅಮರಾವತಿ, ತಿರುಚಿರಾಪಳ್ಳಿ ಮತ್ತು ತಂಜಾವೂರು ನಗರಗಳು ಎಲ್ಲಾ ಯೋಜನೆಗಳ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ 22 ಸ್ಮಾರ್ಟ್ ಸಿಟಿಗಳಾಗಿವೆ ಎಂದು ಹೇಳಲಾಗಿದೆ.

NARENDRA MODI

ನಾವು ಮಾರ್ಚ್ ವೇಳೆಗೆ 22 ಸ್ಮಾರ್ಟ್ ಸಿಟಿಗಳನ್ನು ಪೂರ್ಣಗೊಳಿಸುತ್ತೇವೆ ಏಕೆಂದರೆ ಈ ನಗರಗಳಲ್ಲಿನ ಯೋಜನೆಗಳು ಅಂತಿಮ ಹಂತದಲ್ಲಿವೆ. ಮುಂದಿನ 3-4 ತಿಂಗಳಲ್ಲಿ ನಾವು ಉಳಿದ 78 ನಗರಗಳ ಯೋಜನೆಯ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಏನಿದು ಸ್ಮಾರ್ಟ್ ಸಿಟಿ ಮಿಷನ್?
ನರೇಂದ್ರ ಮೋದಿ (Narendra Modi) ಸರ್ಕಾರವು ತನ್ನ ಪ್ರಮುಖ ಸ್ಮಾರ್ಟ್ ಸಿಟಿ ಮಿಷನ್ ಅನ್ನು ಜೂನ್ 25, 2015 ರಂದು ಪ್ರಾರಂಭಿಸಿತು. ಜನವರಿ 2016 ರಿಂದ ಜೂನ್ 2018ರ ವರೆಗೆ 4 ಸುತ್ತಿನ ಸ್ಪರ್ಧೆಯ ಮೂಲಕ 100 ನಗರಗಳನ್ನು ಪುನರಾಭಿವೃದ್ಧಿಗಾಗಿ ಆಯ್ಕೆ ಮಾಡಲಾಯಿತು. ದೇಶದಲ್ಲಿ ವಾಸಿಸುವ ಜನರ ಜೀವನ ಗುಣಮಟ್ಟ ಸುಧಾರಿಸುವುದು ಹಾಗೂ ಆರ್ಥಿಕ ಬೆಳವಣಿಗೆ ಹೆಚ್ಚಿಸುವುದು, ಸ್ವಚ್ಛ ಹಾಗೂ ಸುಸ್ಥಿರ ಪರಿಸರ ಕಲ್ಪಿಸಿಕೊಡುವ ನಗರಗಳನ್ನು ಉತ್ತೇಜಿಸುವುದು ಈ ಮಿಷನ್‌ನ ಉದ್ದೇಶವಾಗಿದೆ.

Smart Cities Mission 3

ಈ ವರ್ಷರಂಭದಲ್ಲಿ ಜನವರಿ 27ರ ವರೆಗೆ 100 ಸ್ಮಾರ್ಟ್ ಸಿಟಿಗಳಲ್ಲಿ 1,81,322 ಕೋಟಿ ಮೌಲ್ಯದ 7,804 ಯೋಜನೆಗಳ ಅನುಷ್ಠಾನಕ್ಕೆ ಆದೇಶಿಸಲಾಗಿದ್ದು, ಅದರಲ್ಲಿ 98,796 ಕೋಟಿ ಮೊತ್ತದ 5,246 ಯೋಜನೆಗಳು ಪೂರ್ಣಗೊಂಡಿವೆ. ಮಿಷನ್ ಅಡಿಯಲ್ಲಿ ಕೇಂದ್ರ ಸರ್ಕಾರ ಸಹ 36,447 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, 32,095 ಕೋಟಿ (ಶೇ.88) ಅನುದಾನವನ್ನ ಬಳಸಿಕೊಳ್ಳಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ ಇತ್ತೀಚೆಗೆ ರಾಜ್ಯಸಭೆಗೆ ತಿಳಿಸಿದ್ದರು.

ಪ್ರಸ್ತುತ, ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಹೆಚ್ಚಿನ ನಗರಗಳನ್ನು ಸೇರಿಸಲು ಸರ್ಕಾರಕ್ಕೆ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಸಚಿವಾಲಯ ಹೇಳಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *