ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮನೆಯ ಮೇಲೆ ಗುಂಡಿನ ದಾಳಿ ನಡೆದ ಪ್ರಕರಣವಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ನಟನ ಮನೆಗೆ ಭೇಟಿ ನೀಡಿ ಸಲ್ಮಾನ್ ಖಾನ್ ಹೇಳಿಕೆಯನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಗಂಡಸರನ್ನು ನಂಬಲು ಭಯವಾಗುತ್ತದೆ ಎಂದ ಅಭಿಮಾನಿಗೆ ರಶ್ಮಿಕಾ ಸಲಹೆ
ಮುಂಬೈ ಬಾಂದ್ರಾ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿ ಸಲ್ಮಾನ್ ಮತ್ತು ಸಹೋದರ ಅರ್ಬಾಜ್ ಖಾನ್ (Arbaaz Khan) ಅವರ ಹೇಳಿಕೆ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ವೇಳೆ, ನಮ್ಮ ಮನೆಯ ಮೇಲೆ ಅಪರಿಚಿತರು ಗುಂಡು ಹಾರಿಸಿದಾಗ ನಿದ್ರೆಯಲ್ಲಿದ್ದೆ ಶಬ್ಧ ಕೇಳಿ ಹೊರಬಂದಾಗ ಗುಂಡಿನ ಗುರುತು ಪತ್ತೆಯಾಯಿತು. ಆದರೆ ಗುಂಡು ಹಾರಿಸಿದವರು ಯಾರು ಎಂದು ಕಾಣಿಸಲಿಲ್ಲ ಎಂದು ಸಲ್ಮಾನ್ ಖಾನ್ ಹೇಳಿಕೆ ನೀಡಿದ್ದಾರೆ.
ಅಂದಹಾಗೆ, ಕಳೆದ ತಿಂಗಳು ಏಪ್ರಿಲ್ 14ರಂದು ಮುಂಜಾನೆ 5 ಗಂಟೆ ಸುಮಾರಿಗೆ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡು ಹಾರಿಸಿದ್ದರು. ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಗಾಳಿಯಲ್ಲಿ ಹಲವು ಬಾರಿ ಗುಂಡು ಹಾರಿಸಿ ಆ ನಂತರ ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ ಈ ದಾಳಿಯಲ್ಲಿ ತಮ್ಮದೇ ಕೈವಾಡವಿದೆ ಎಂದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ವಾರ್ನಿಂಗ್ ಕೊಟ್ಟಿದ್ದರು.
ಈ ಪ್ರಕರಣ ವಿಚಾರವಾಗಿ ಮುಂಬೈ ಪೊಲೀಸರು ಈಗಾಗಲೇ 6 ಮಂದಿಯನ್ನು ಬಂಧಿಸಿದ್ದಾರೆ. ಈ ವಿಚಾರವಾಗಿ ತನಿಖೆ ನಡೆಯುತ್ತಿದೆ.