ಆನೇಕಲ್: ಶಾಲೆಯ ಬಾತ್ರೂಮ್‌ನಲ್ಲಿ ಪಟಾಕಿ ಬ್ಲಾಸ್ಟ್ ಆದ ಭಾರೀ ಶಬ್ದಕ್ಕೆ ಬಾಂಬ್ ಎಂದುಕೊಂಡು ಶಾಲೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಬೆಚ್ಚಿಬಿದ್ದಿರುವ ಘಟನೆ ಬೆಂಗಳೂರು (Bengaluru Rural) ಹೊರವಲಯದ ಆನೇಕಲ್ (Anekal) ತಾಲೂಕಿನ ಬನ್ನೇರುಘಟ್ಟ (Banneraghatta) ಸಮೀಪದ ಎಸ್ ಬಿಂಗಿಪುರದ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಸೋಮವಾರ (ನ.10) ಬೆಳಿಗ್ಗೆ 10:30ರ ಸುಮಾರಿಗೆ ಶಾಲೆಯ ಬಾತ್ರೂಮ್‌ನಲ್ಲಿ ಬ್ಲಾಸ್ಟ್ ಆಗಿರುವ ಸೌಂಡ್ ಕೇಳಿಸಿದೆ. ಇದರಿಂದ ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನ ನಿವಾಸಿಗಳು ಆತಂಕಗೊಂಡಿದ್ದಾರೆ. ಕೂಡಲೇ ಶಾಲೆಯ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಪಟಾಕಿ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಇಸ್ಲಾಮಾಬಾದ್ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿ ಕಾರು ಬಾಂಬ್ ಸ್ಫೋಟ; 12 ಮಂದಿ ಸಾವು
ಮಂಗಳವಾರ (ನ.11) ಬೆಳಿಗ್ಗೆ ಓರ್ವ ವಿದ್ಯಾರ್ಥಿಯ ಪೋಷಕರು ಪೊಲೀಸರಿಗೆ ಫೋನ್ ಮಾಡಿ, ಶಾಲೆಯಲ್ಲಿ ನಡೆದ ವಿಷಯವನ್ನು ತಿಳಿಸಿದ್ದಾರೆ. ಈ ಹಿನ್ನೆಲೆ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಶಾಲಾ ಆಡಳಿತ ಮಂಡಳಿಯವರನ್ನು ಠಾಣೆಗೆ ಕರೆಸಿ, ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಮನೆಗೆ ತಂದ ಪಟಾಕಿಯನ್ನು ಮಕ್ಕಳು ಶಾಲೆಗೆ ತಂದು ಈ ರೀತಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದ ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದೇವೆ. ಅವರಿಗೂ ಅವರ ತಪ್ಪಿನ ಅರಿವಾಗಿದೆ. ಆದರೆ ಬಾಂಬ್ ಬ್ಲಾಸ್ಟ್ ಎಂಬಂತೆ ಬಿಂಬಿಸಲಾಗುತ್ತಿದೆ. ಆ ರೀತಿಯ ಘಟನೆ ಏನು ನಡೆದಿಲ್ಲ ಎಂದು ಶಾಲೆಯ ಸಹಾಯಕ ವ್ಯವಸ್ಥಾಪಕ ಜಯಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ.ಇದನ್ನೂ ಓದಿ: ದೆಹಲಿ ಸ್ಫೋಟದ ಬಾಧಿತರಿಗೆ ನಮ್ಮ ಪ್ರಾರ್ಥನೆ: ಆರ್‌ಸಿಬಿ

