ಮೈಸೂರು: ಜಿಲ್ಲೆಯ ಹೆಚ್.ಡಿ ಕೋಟೆ ತಾಲ್ಲೂಕಿನ ಹಾದನೂರು ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ರಸ್ತೆ ಪಕ್ಕದ ಮರವೊಂದು ಹೊತ್ತಿ ಉರಿದಿದೆ.
ವಿದ್ಯುತ್ ಸ್ಪರ್ಶದಿಂದ ಮರ ಹೊತ್ತಿ ಉರಿಯುತ್ತಿರುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಒಂದು ದೊಡ್ಡ ಮರದ ಮಧ್ಯದ ಕೊಂಬೆಗೆ ವಿದ್ಯತ್ ಸ್ಪರ್ಶಿಸಿ ಉರಿಯಲು ಆರಂಭಿಸಿದೆ. ಧಗ ಧಗವಾಗಿ ಉರಿಯುತ್ತಿರುವ ಮರದಿಂದ ಬೆಂಕಿಯ ಕಿಡಿಗಳು ನೆಲಕ್ಕೆ ಬೀಳುತ್ತಿದೆ. ಈ ಸಂದರ್ಭದಲ್ಲಿ ಜನರಾಗಲಿ, ಯಾವುದೇ ಸಾರಿಗೆ ಬಸ್‍ಗಳಾಗಲಿ ಓಡಾಡುತ್ತಿರಲಿಲ್ಲ. ಆದ್ದರಿಂದ ಯಾರೊಬ್ಬರಿಗೂ ಅಪಾಯ ಸಂಭವಿಸಿಲ್ಲ.
Advertisement
Advertisement
ಮರದಲ್ಲಿ ಬೆಂಕಿ ಕಾಣಿಕೊಂಡ ತಕ್ಷಣ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೆ ಚೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸದ ಕಾರಣ ಮರ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ತನಕ ಗಂಟೆಗಟ್ಟಲೆ ಹೊತ್ತಿ ಉರಿದಿದೆ.
Advertisement
ಈ ಅವಘಡ ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.