ಮುಂಬೈ: ಶನಿವಾರ ತಡರಾತ್ರಿ ಮುಂಬೈನ (Mumbai) ರೆಹಮಾನ್ ಸ್ಟ್ರೀಟ್‌ನಲ್ಲಿರುವ ಜುಮ್ಮಾ ಮಸೀದಿ (Jumma Masjid) ಬಳಿ ಬೆಂಕಿ (Fire) ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಸುಮಾರು 20-25 ಅಂಗಡಿಗಳು ಬೆಂಕಿಗಾಹುತಿಯಾಗಿವೆ.
ಶನಿವಾರ ರಾತ್ರಿ 8:15 ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, 2 ಗಂಟೆಗಳ ಕಾಲ ಹೊತ್ತಿ ಉರಿದಿದೆ. ಮಸೀದಿ ಬಳಿಯಲ್ಲಿದ್ದ ಸುಮಾರು 25 ಅಂಗಡಿಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ನಂದಿಸಲು 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮುಂಬೈ ದಾಳಿ ವೇಳೆ ನಾನೂ ಹೋಟೆಲ್‌ನಲ್ಲಿದ್ದೆ: ಪಾರಾದ ಥ್ರಿಲ್ಲಿಂಗ್ ಘಟನೆ ವಿವರಿಸಿದ ಅದಾನಿ
Advertisement
Advertisement
ಆರಂಭದಲ್ಲಿ ಸುಮಾರು 7 ಅಂಗಡಿಗಳಿಗೆ ಬೆಂಕಿ ತಗುಲಿರುವುದಾಗಿ ಬಿಎಂಸಿ ತಿಳಿಸಿತ್ತು. ತಡರಾತ್ರಿ ವಿಪತ್ತು ನಿರ್ವಹಣಾ ತಂಡ 20-25 ಅಂಗಡಿಗಳು ಬೆಂಕಿಗಾಹುತಿಯಾಗಿರುವ ಬಗ್ಗೆ ತಿಳಿಸಿದೆ.
Advertisement
ಮಾರುಕಟ್ಟೆಯಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಮುಂಬೈ ಪೊಲೀಸರು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯವಾಗಿರುವ ಬಗ್ಗೆ ವರದಿಯಾಗಿಲ್ಲ. ಇದನ್ನೂ ಓದಿ: ಮೋದಿಯನ್ನು ಮೆಚ್ಚಿಸಲು ರಸ್ತೆಗಳಿಗೆ ತೇಪೆ ಹಾಕುವ ಕಾರ್ಯಕ್ಕೆ ಮುಂದಾದ ಹು-ಧಾ ಪಾಲಿಕೆ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k