ಮಂಗಳೂರು: ಬೆಂಕಿ ಅವಘಡಕ್ಕೀಡಾದ ಸಾಗರ ಸಂಶೋಧನ ಹಡಗಿನಲ್ಲಿ ಸಿಲುಕಿದ್ದ 16 ವಿಜ್ಞಾನಿಗಳು ಸೇರಿದಂತೆ 46 ಜನರನ್ನು ಕರಾವಳಿಯ ಕಾವಲು ಪಡೆಯ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮಂಗಳೂರು ಕಡಲ ತೀರದಿಂದ 40 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು.
ಕೊಚ್ಚಿಯಿಂದ ಸಂಶೋಧನೆಗಾಗಿ ಮಂಗಳೂರಿಗೆ ಬಂದಿದ್ದ ಹಡಗು ಹಿಂದಿರುಗುತ್ತಿದ್ದ ವೇಳೆ ಬೆಂಕಿ ಅವಘಡಕ್ಕೆ ತುತ್ತಾಗಿತ್ತು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಶುಕ್ರವಾರ ರಾತ್ರಿ ಸುಮಾರು 10 ಗಂಟೆಗೆ ಮಂಗಳೂರು ಕೇಂದ್ರ ಕಚೇರಿಗೆ ಲಭ್ಯವಾಗಿತ್ತು. ಕೂಡಲೇ ರಕ್ಷಣಾ ಕಾರ್ಯಚರಣೆ ಆರಂಭಿಸಿದ ಸಿಬ್ಬಂದಿ ಐಸಿಜಿಎಸ್ ವಿಕ್ರಂ ಮತ್ತು ಸುಜಯ್ ಮೂಲಕ ಘಟನಾ ಸ್ಥಳಕ್ಕೆ ತೆರಳಿದ್ದರು.
ಬೆಂಕಿಯನ್ನು ನಂದಿಸಿ, ಹಡಗಿನಲ್ಲಿದ್ದ 16 ವಿಜ್ಞಾನಿಗಳು ಹಾಗು 30 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಬೆಂಕಿ ಸಂಪೂರ್ಣ ನಂದಿದ ಬಳಿಕ ಹಡಗನ್ನು ಮಂಗಳೂರಿಗೆ ತರಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv