ಉಡುಪಿ: ನಗರದ ಅಂಬಾಗಿಲು- ಪೆರಂಪಳ್ಳಿ ರಸ್ತೆಯಲ್ಲಿ ಬೆಂಕಿ ಅವಘಡ ನಡೆದಿದೆ. ಗುಜರಿ ಅಂಗಡಿಯ ಗೋಡಾನ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಹನೀಫ್ ಎಂಬವರಿಗೆ ಸೇರಿದ ಗುಜರಿ ಅಂಗಡಿಯಲ್ಲಿ ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ಆಮೇಲೆ ತೀವ್ರಗೊಂಡಿದ್ದು, ಅಪಾರ ಹಾನಿಯಾಗಿದೆ. ಗುಜರಿ ಅಂಗಡಿಯಲ್ಲಿ ಟಯರ್, ಆಯಿಲ್, ಪೇಪರ್ ಪ್ಲಾಸ್ಟಿಕ್‌ಗಳನ್ನು ಶೇಖರಣೆ ಮಾಡಿ ಇಡಲಾಗಿತ್ತು. ಉಡುಪಿ ಮತ್ತು ಮಲ್ಪೆಯ ಅಗ್ನಿಶಾಮಕದಳ ನಿರಂತರ ಕಾರ್ಯಾಚರಣೆ ಮಾಡಿತು.
Advertisement
ಬೆಂಕಿಯನ್ನು ಹತೋಟಿಗೆ ತರಲು ಕಷ್ಟವಾಯಿತು. ಕೂಡಲೇ ಅಕ್ಕಪಕ್ಕದ ಮನೆಯವರನ್ನು ಖಾಲಿ ಮಾಡಿಸಿದರು. ಅಮೂಲ್ಯ ವಸ್ತುಗಳನ್ನು ಮತ್ತು ದಾಖಲೆಗಳನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದರು.
Advertisement
ಹೆಚ್ಚುವರಿ ವಾಹನಗಳನ್ನು ತರಿಸಿಕೊಂಡು ಬೆಂಕಿ ಸುತ್ತಮುತ್ತ ಹರಡದಂತೆ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರು. ಬೆಂಕಿ ಹತ್ತಿಕೊಳ್ಳಲು ನಿಖರ ಕಾರಣದ ಬಗ್ಗೆ ಉಡುಪಿ ಮಣಿಪಾಲ ಪೊಲೀಸರು ತನಿಖೆ ಮಾಡುತ್ತಿದ್ದಾರೆ.