ಬೆಂಗಳೂರು: ಕೇರಳ (Kerala) ಚಿತ್ರ ರಂಗದಲ್ಲಿ ಎದ್ದಿರುವ ಬಿರುಗಾಳಿ ಸಂಬಂಧ, ಕನ್ನಡ ಚಿತ್ರರಂಗದ ಫೈರ್ (FIRE) ಸಂಸ್ಥೆ ನೀಡಿರುವ ಮನವಿಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಭರವಸೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಫೈರ್ ಸಂಸ್ಥೆಯ ಸದಸ್ಯರು ಇಂದು ಕೇರಳ ಮಾದರಿಯಲ್ಲಿ ಸಮಿತಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ರೇಣುಕಾಸ್ವಾಮಿ ತಲೆ ಓಪನ್ – ‘ಡಿ’ ಗ್ಯಾಂಗ್ ಭೀಕರ ಕ್ರೌರ್ಯ ಫೋಟೊಗಳಿಂದ ಬಹಿರಂಗ
ಕನ್ನಡ ಚಿತ್ರರಂಗದಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕೇರಳ ಮಾದರಿಯಲ್ಲಿ ಸಮಿತಿ ರಚನೆ ಮಾಡುವಂತೆ ಇಂದು (ಗುರುವಾರ) ನಟ ಚೇತನ್, ಶೃತಿ ಹರಿಹರನ್ (Sruthi Hariharan) ನೇತೃತ್ವದ ಫೈರ್ ಸಂಸ್ಥೆ ಸಿದ್ದರಾಮಯ್ಯರನ್ನ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದರು. ಫೈರ್ ಸಂಸ್ಥೆ ಮನವಿಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಹೋಟೆಲ್‌ಗೆ ನುಗ್ಗಿದ ಟಿಪ್ಪರ್ – ಇಬ್ಬರ ದುರ್ಮರಣ