ಮೀರತ್: ರೈಲಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರು ಬೋಗಿಯನ್ನು ತಳ್ಳಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದ ಮೀರತ್ ಜಿಲ್ಲೆಯ ದೌರಾಲಾ ರೈಲ್ವೆ ಸ್ಟೇಶನ್‍ನಲ್ಲಿ ಬೆಂಕಿ ತಗುಲಿದ್ದ ರೈಲಿನ ಎಂಜಿನ್‍ನಿಂದ ಬೇರ್ಪಡಿಸಲು ಉಳಿದ ಕೋಚ್‍ಗಳನ್ನು ತಳ್ಳಿದ್ದಾರೆ.
Advertisement
Advertisement
ದೆಹಲಿಯಿಂದ ಸಹರಾನ್‍ಪುರಕ್ಕೆ ರೈಲು ಚಲಿಸುತ್ತಿತ್ತು. ಈ ವೇಳೆ ಉತ್ತರಪ್ರದೇಶದ ಮೀರತ್ ಜಿಲ್ಲೆಯ ದೌರಾಲಾ ರೈಲ್ವೆ ಸ್ಟೇಶನ್‍ನಲ್ಲಿ ಇಂಜಿನ್ ಹಾಗೂ ಎರಡು ಬೋಗಿಗಳಿಗೆ ಬೆಂಕಿ ತಗಲಿತ್ತು. ಇದರಿಂದ ಬೇರೆ ಬೋಗಿಗಳಿಗೂ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯಿತ್ತು.
Advertisement
#WATCH | Uttar Pradesh: Fire broke out in engine & two compartments of a Saharanpur-Delhi train, at Daurala railway station near Meerut.
Passengers push the train in a bid to separate the rest of the compartments from the engine and two compartments on which the fire broke out. pic.twitter.com/Vp2sCcLFsd
— ANI UP/Uttarakhand (@ANINewsUP) March 5, 2022
Advertisement
ಬೆಂಕಿ ಹೊತ್ತಿಕೊಂಡಿದ್ದ ಇಂಜಿನ್ ಮತ್ತು ಎರಡು ಬೋಗಿಗಳನ್ನು ಉಳಿದ ಕೋಚ್‍ಗಳಿಂದ ಬೇರ್ಪಡಿಸಲು ಪ್ರಯಾಣಿಕರೆಲ್ಲರೂ ಸೇರಿ ರೈಲನ್ನು ತಳ್ಳಿದರು. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಬೆಂಕಿ ಅನಾಹುತಕ್ಕೆ ಕಾರಣವೇನು ಎಂಬುದು ಈವರೆಗೆ ತಿಳಿದುಬಂದಿಲ್ಲ. ಇದನ್ನೂ ಓದಿ: ಮಗನಿಗಾಗಿ 1,400 ಕಿ.ಮೀ ಸ್ಕೂಟರ್ ಓಡಿಸಿದ್ದ ತಾಯಿಗೆ ಟೆನ್ಶನ್ – ಮೋದಿಗೆ ಪತ್ರ
Uttar Pradesh | Fire broke out in the engine and two compartments of a train going from Saharanpur to Delhi, earlier today at Daurala railway station near Meerut. Cause of the fire is yet to be ascertained. No injuries/casualties reported. pic.twitter.com/WIXv6e0J9f
— ANI UP/Uttarakhand (@ANINewsUP) March 5, 2022
ರೈಲ್ವೆಯ ಟ್ರಾಫಿಕ್ ಇನ್ಸ್‍ಪೆಕ್ಟರ್ ವೈಕೆ ಝಾ ಮಾತನಾಡಿ, ಘಟನೆಯಲ್ಲಿ ಯಾವುದೇ ಸಾವು, ನೋವುಗಳು ಆಗಿಲ್ಲ. ನಾಲ್ಕನೇ ಮೋಟಾರು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದಾಗಿ ರೈಲನ್ನು ನಿಲ್ಲಿಸಿದ ನಂತರ ಉಳಿದ ಕೋಚ್‍ಗಳನ್ನು ಪ್ರತ್ಯೇಕಿಸಲಾಗಿದೆ. ಪ್ರಯಾಣಿಕರನ್ನು ಮುಂದಿನ ರೈಲಿನಲ್ಲಿ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಮಗನ ಮದುವೆಯ ಊಟ ಸೇವಿಸಿ 1,200 ಮಂದಿ ಅಸ್ವಸ್ಥ