ಕುಷನ್ ಶಾಪ್ ನಲ್ಲಿ ಅಗ್ನಿ ಅವಘಡ- 10ಲಕ್ಷಕ್ಕೂ ಅಧಿಕ ವಸ್ತು, ನಗದು ಭಸ್ಮ

Public TV
1 Min Read
KWR

ಕಾರವಾರ: ಕುಷನ್ ಶಾಪ್ ಗೆ ಆಕಸ್ಮಿಕ ಬೆಂಕಿ ತಗುಲಿ ಅಂಗಡಿಯಲ್ಲಿಟ್ಟಿದ್ದ ಹಣ ಹಾಗೂ ವಸ್ತುಗಳು ಸಂಪೂರ್ಣ ಹೊತ್ತಿ ಉರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನಿಲೇಕಣಿಯಲ್ಲಿ ನಡೆದಿದೆ.

vlcsnap 2018 02 12 08h44m46s88

ಕುಮಟಾ ಮೂಲದ ತಿಮ್ಮಪ್ಪ ರಾಮಚಂದ್ರ ಎಂಬವರಿಗೆ ಸೇರಿದ ಕುಷನ್ ಷಾಪ್ ಇದಾಗಿದ್ದು ಮಧ್ಯರಾತ್ರಿ ವೇಳೆ ಸಂಭವಿಸಿದ್ದು ಅಂಗಡಿಯಲ್ಲಿಟ್ಟಿದ್ದ ಹದಿನೈದು ಸಾವಿರಕ್ಕೂ ಹೆಚ್ಚಿನ ಹಣ ಹಾಗೂ ಹತ್ತು ಲಕ್ಷಕ್ಕೂ ಹೆಚ್ಚಿನ ವಸ್ತುಗಳು ಬೆಂಕಿಗಾಹುತಿಯಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದು ಡಿ.ವೈ ಎಸ್ಪಿ ಡಿ.ಎಲ್ ನಾಗೇಶ್, ಪಿಎಸ್‍ಐ ಮಾದೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

vlcsnap 2018 02 12 08h44m55s177

vlcsnap 2018 02 12 08h44m40s15

vlcsnap 2018 02 12 08h44m34s218

Share This Article
Leave a Comment

Leave a Reply

Your email address will not be published. Required fields are marked *