ಹೈದರಾಬಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಸೈರಾ’ ಶೂಟಿಂಗ್ ಸೆಟ್‍ನಲ್ಲಿ ಭಾರೀ ಪ್ರಮಾಣದಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಶುಕ್ರವಾರ ಮುಂಜಾನೆ ಈ ಅಗ್ನಿ ಅವಘಡ ಸಂಭವಿಸಿದೆ. ಹೈದರಾಬಾದಿನ ಕೊಕಾಪೇಟ ಪ್ರದೇಶದ ನಿರ್ಮಾಪಕ ಅಲ್ಲು ಅರವಿಂದ್ ಫಾರ್ಮ್ ಹೌಸಿನಲ್ಲಿ ನಿರ್ಮಿಸಿದ್ದ ವಿಶೇಷ ಸೆಟ್ ನಲ್ಲಿ ಶೂಟಿಂಗ್ ನಡೆಯುತ್ತಿತ್ತು.
Advertisement
Advertisement
ಸ್ವತಂತ್ರ್ಯ ಹೋರಾಟಗಾರ ನರಸಿಂಹ ರೆಡ್ಡಿ ಜೀವನದ ಕುರಿತು ನಿರ್ಮಾಣವಾಗುತ್ತಿರುವ ಚಿತ್ರವಾದ ಪರಿಣಾಮ ಬೃಹತ್ ಸೆಟ್ ನಿರ್ಮಾಣ ಮಾಡಿ ಶೂಟಿಂಗ್ ನಡೆಸಲಾಗುತ್ತಿತ್ತು. ಅಗ್ನಿ ಪ್ರಮಾದದ ಹಿನ್ನೆಲೆಯಲ್ಲಿ ಸುಮಾರು 2 ಕೋಟಿ ರೂ. ನಷ್ಟ ಸಂಭವಿಸಿಬಹುದು ಎಂದು ಅಂದಾಜಿಸಲಾಗಿದೆ. ಆದರೆ ಅಗ್ನಿ ಪ್ರಮಾದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧವಿಸಿ ಬೆಂಕಿಯನ್ನ ನಿಯಂತ್ರಿಸಿದ್ದಾರೆ.
Advertisement
ಚಿತ್ರದಲ್ಲಿ ನಟ ಚಿರಂಜೀವಿ ಸೈರಾ ನರಸಿಂಹರೆಡ್ಡಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿರಂಜೀವಿ ಪುತ್ರ ಮೆಗಾ ಪವರ್ ಸ್ಟಾರ್ ರಾಮ್‍ಚರಣ್ ಅವರ ಸ್ವತಃ ಕೌಣಿದಲ ಪ್ರೋಡಕ್ಷನ್ ಸಂಸ್ಥೆಯ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಚಿತ್ರವನ್ನು ಸುರೇಂದ್ರ ರೆಡ್ಡಿ ನಿರ್ದೇಶನ ಮಾಡುತ್ತಿದ್ದು, ಚಿರಂಜೀವಿ ಅವರ ಕನಸಿನ ಪ್ರಾಜೆಕ್ಟ್ ಇದಾಗಿದೆ.
Advertisement
Massive fire in megastar #Chiranjeevi's farmhouse in Kokapet on the outskirts of #Hyderabad where shooting for #SyeraaNarasimhareddy is on. Fire erupted because of short circuit. Luckily, no one was injured as it was on off day. @SrBachchan pic.twitter.com/vsIIJBjpZI
— Krishnamurthy (@krishna0302) May 3, 2019