ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwar Hill) ಅಗ್ನಿ ಅವಘಡ ಸಂಭವಿಸಿದೆ. ಲಾಡು ತಯಾರಿಸುವ ಕೋಣೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ಮಹದೇಶ್ವರ ದೇಗುಲದ (Temple) ಹಿಂಭಾಗದಲ್ಲೇ ಇರುವ ಲಾಡು ತಯಾರಿಸುವ ಘಟಕದಲ್ಲಿ ಬೆಂಕಿ (Fire) ಹೊತ್ತಿಕೊಂಡಿದೆ. ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿರುವ ಹಿನ್ನೆಲೆ ಅಲ್ಲಿನ ಸಿಬ್ಬಂದಿ ಹೊರಗೆ ಓಡಿ ಬಂದಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯ ವರದಿಯಾಗಿಲ್ಲ.
Advertisement
Advertisement
ಘಟನೆ ಬಳಿಕ ಪ್ರಾಧಿಕಾರದ ನೌಕರರಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಬೆಂಕಿ ಹೊತ್ತಿಕೊಳ್ಳಲು ಸಿಲಿಂಡರ್ ಕಾರಣವೆಂದು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಇದನ್ನೂ ಓದಿ: SSLC, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
Advertisement
ಎಣ್ಣೆ ಬಾಣಲೆಯಿಂದ ಬೆಂಕಿ ಪ್ರಜ್ವಲಿಸಿ, ಹೆಚ್ಚಿನ ಭಾಗಕ್ಕೆ ಹರಡಿಕೊಂಡಿದೆ. 2 ಟ್ಯಾಂಕರ್ ನೀರಿನ ಮೂಲಕ ಮಹದೇಶ್ವರ ಬೆಟ್ಟದ ಸ್ವಚ್ಛತಾ ಸಿಬ್ಬಂದಿ ಜೊತೆಗೂಡಿ ಬೆಂಕಿ ನಂದಿಸಿದ್ದಾರೆ. ಒಂದು ಭಾಗದ ಗೋಡೆ ಹಾಳಾಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವೆಂದು ಹೇಳಿದ್ದಾರೆ.
Advertisement
ದೇವಾಲಯದ ಆವರಣದಲ್ಲಿ ಬೆಂಕಿ ಹೊತ್ತಿಕೊಂಡ ಹಿನ್ನೆಲೆ ಸತತ 1 ಗಂಟೆ ಪರಿಶ್ರಮದ ಬಳಿಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿದ ಸ್ಥಳದಲ್ಲಿ ಪ್ರಾಧಿಕಾರದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: Bengaluru Bomb Threat: ಶಾಲೆಗಳು, ದೇವಸ್ಥಾನಗಳಿಗೆ ಭದ್ರತೆ ಒದಗಿಸುತ್ತೇವೆ – ಸಿಎಂ