ಕೊಪ್ಪಳ: ಇಲ್ಲಿನ ಗಂಗಾವತಿ ನಗರದ (Gangavathi City) ಗಣೇಶ ವೃತ್ತದಲ್ಲಿ ಕೆಜೆಪಿ ಜ್ಯುವೆಲ್ಲರಿ ಮಳಿಗೆಯಲ್ಲಿ (Jewellery Shops) ಅಗ್ನಿ ಅವಘಡ (Fire Accident) ಸಂಭವಿಸಿದ್ದು, ಮೂರು ಅಂತಸ್ತಿನ ಕಟ್ಟಡ ಬೆಂಕಿಗೆ ಆಹುತಿ ಆಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ (Short Circuit) ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ತಡರಾತ್ರಿ ಘಟನೆ ನಡೆದಿದೆ. ಕೆಲ ಹೊತ್ತಿನಲ್ಲೇ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಜನನಿಬಿಡ ಪ್ರದೇಶದಲ್ಲಿ ಅವಘಡ ನಡೆದಿದ್ದು, ಭಾರೀ ಅನಾಹುತ ತಪ್ಪಿದೆ. ಸ್ಥಳಕ್ಕೆ 4 ಅಗ್ನಿಶಾಮಕ ವಾಹನ ದೌಡಾಯಿಸಿ, ಬೆಂಕಿ ನಂದಿಸಲು ಹರಸಾಹಸ ನಡೆಸಿವೆ.
Advertisement
Advertisement
ಒಟ್ಟು 3 ಮಹಡಿಯ ಕೆಜೆಪಿ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಚಿನ್ನಾಭರಣ ಮತ್ತು ಬಟ್ಟೆ ಅಂಗಡಿಗಳಿವೆ ಇವೆ. ಎಲ್ಲ ಕಡೆ ಬೆಂಕಿ ಹೊತ್ತಿಕೊಂಡಿದೆ. ಸತತ 6 ಗಂಟೆ ಕಾರ್ಯಾಚರಣೆ ನಂತರ ಬೆಂಕಿ ಹರಡುವಿಕೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ಅಪಾರ ಪ್ರಮಾಣದ ಚಿನ್ನಾಭರಣ ಬೆಂಕಿಗೆ ಆಹುತಿ ಆಗಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಸರ್ಕಾರಿ ಶಾಲೆ ನಿರ್ಮಾಣವಾದ್ರೆ ಕಿರಿಕಿರಿ ಎಂದು ಕಾಮಗಾರಿಗೆ ಅಡ್ಡಿ – ಸಿಎ ಸೈಟಲ್ಲಿ ದೇವಾಲಯ ನಿರ್ಮಾಣ
Advertisement
Advertisement
ಗಂಗಾವತಿ ನಗರ ಠಾಣೆಯಲ್ಲಿ (Gangavathi City Police) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇನ್ಮುಂದೆ ರಾಜ್ಯದ ಪರ್ಮಿಟ್ ವಾಹನಗಳಿಗೆ ಪ್ಯಾನಿಕ್ ಬಟನ್, GPS ಅಳವಡಿಕೆ ಕಡ್ಡಾಯ