Bengaluru CityKarnatakaLatestMain Post

ಅರುಣ್ ಸಾಗರ್ ಶೂಟಿಂಗ್ ಶೆಡ್‍ಗೆ ಬೆಂಕಿ – ಧಗಧಗನೆ ಹೊತ್ತಿ ಉರಿದ ಆರ್ಟ್ ಗ್ಯಾಲರಿ

ಬೆಂಗಳೂರು: ನಟ ಅರುಣ್ ಸಾಗರ್ ಅವರಿಗೆ ಸೇರಿದ ಶೂಟಿಂಗ್ ಶೆಡ್ ಬೆಂಕಿಗಾಹುತಿಯಾದ ಘಟನೆ ಬೆಂಗಳೂರಿನ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಅರುಣ್ ಸಾಗರ್ ಶೂಟಿಂಗ್ ಶೆಡ್‍ಗೆ ಬೆಂಕಿ - ಧಗಧಗನೆ ಹೊತ್ತಿ ಉರಿದ ಆರ್ಟ್ ಗ್ಯಾಲರಿ

ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ಅರುಣ್ ಸಾಗರ್ ಅವರಿಗೆ ಸೇರಿದ ಶೂಟಿಂಗ್ ಶೆಡ್ ಹೌಸ್ ಇತ್ತು. ಅದರ ಪಕ್ಕದಲ್ಲೆ ಪ್ಲಾಸ್ಟಿಕ್ ಗೋದಾಮು ಕೂಡಾ ಇತ್ತು. ಆಕಸ್ಮಿಕವಾಗಿ ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ಬಿದ್ದ ಪರಿಣಾಮ ಬೆಂಕಿಯ ತೀವ್ರತೆ ಪಕ್ಕದಲ್ಲಿದ್ದ ಶೂಟಿಂಗ್ ಶೆಡ್‍ಗೂ ಆವರಿಸಿದೆ. ಇದರಿಂದಾಗಿ ಶೂಟಿಂಗ್ ಶೆಡ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ.

ಅರುಣ್ ಸಾಗರ್ ಶೂಟಿಂಗ್ ಶೆಡ್‍ಗೆ ಬೆಂಕಿ - ಧಗಧಗನೆ ಹೊತ್ತಿ ಉರಿದ ಆರ್ಟ್ ಗ್ಯಾಲರಿ

ಸುದ್ದಿ ತಿಳಿದು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸುವ ವೇಳೆಗೆ ಶೂಟಿಂಗ್ ಶೆಡ್ ಸಂಪೂರ್ಣವಾಗಿ ಕರಕಲಾಗಿ ಹೋಗಿತ್ತು. ಈ ಕುರಿತು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅರುಣ್ ಸಾಗರ್ ಶೂಟಿಂಗ್ ಶೆಡ್‍ಗೆ ಬೆಂಕಿ - ಧಗಧಗನೆ ಹೊತ್ತಿ ಉರಿದ ಆರ್ಟ್ ಗ್ಯಾಲರಿ ಅರುಣ್ ಸಾಗರ್ ಶೂಟಿಂಗ್ ಶೆಡ್‍ಗೆ ಬೆಂಕಿ - ಧಗಧಗನೆ ಹೊತ್ತಿ ಉರಿದ ಆರ್ಟ್ ಗ್ಯಾಲರಿ ಅರುಣ್ ಸಾಗರ್ ಶೂಟಿಂಗ್ ಶೆಡ್‍ಗೆ ಬೆಂಕಿ - ಧಗಧಗನೆ ಹೊತ್ತಿ ಉರಿದ ಆರ್ಟ್ ಗ್ಯಾಲರಿ

Related Articles

Leave a Reply

Your email address will not be published. Required fields are marked *