ಪಾಟ್ನಾ: ಬಿಹಾರದ ಮುಜಾಫರ್‌ಪುರದಲ್ಲಿ ಭಾನುವಾರ ಬಾಯ್ಲರ್ ಸ್ಫೋಟ ಸಂಭವಿಸಿದ್ದು, ಕಾರ್ಖಾನೆಯ ಮಾಲೀಕರು ಸೇರಿದಂತೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಬೇಲಾ ಇಂಡಸ್ಟ್ರಿಯಲ್ ಏರಿಯಾ, ಹಂತ-11 ರಲ್ಲಿರುವ ನೂಡಲ್ ತಯಾರಿಕಾ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಏಳು ಜನರು ಸಾವನ್ನಪ್ಪಿ ಮತ್ತು ನಾಲ್ವರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಖಾನೆಯ ಮಾಲೀಕ ವಿಕಾಸ್ ಮೋದಿ, ಅವರ ಪತ್ನಿ ಶ್ವೇತಾ ಮೋದಿ, ಮ್ಯಾನೇಜರ್ ಉದಯ್ ಶಂಕರ್, ಸೂಪರ್‌ವೈಸರ್, ಆಪರೇಟರ್ ಮತ್ತು ತಂತ್ರಜ್ಞರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್
Advertisement
Advertisement
ನಗರದ ಡಿಎಸ್‌ಪಿ ನೇತೃತ್ವದ ಬಿಹಾರ ಪೊಲೀಸ್ ತಂಡ ಈ ಬಗ್ಗೆ ತನಿಖೆ ನಡೆಸುತ್ತಿದೆ. ಇದಕ್ಕೂ ಮುನ್ನ, ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈ ಗೊಳ್ಳಲಾಗುತ್ತದೆ ಎಂದು ಬಿಹಾರ ಸಚಿವ ರಾಮ್‌ಸುರತ್ ರೈ ಭರವಸೆ ನೀಡಿದರು. ಇದನ್ನೂ ಓದಿ: 30 ಲಕ್ಷ ರೂ. ಮೌಲ್ಯದ ಗಾಂಜಾ ವಶ – 12 ಜನ ಅರೆಸ್ಟ್
Advertisement
ಭಾನುವಾರದ ಟ್ವೀಟ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು (ಪಿಎಂಎನ್‌ಆರ್‌ಎಫ್) ಪ್ರಧಾನಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ನೀಡುವದಾಗಿ ಹೇಳಿದ್ದು, ಗಾಯಾಳುಗಳಿಗೆ ತಲಾ 50,000 ರೂಪಾಯಿ ನೀಡಲಾಗುವುದು ಎಂದು ಪಿಎಂಒ ತಿಳಿಸಿದೆ.